ಶುಕ್ರವಾರ, ಡಿಸೆಂಬರ್ 2, 2022
19 °C

ಭಾರತದಲ್ಲಿ 100 ವರ್ಷ ಮೇಲ್ಪಟ್ಟ 2.49 ಲಕ್ಷ ಮತದಾರರು: ಸಿಇಸಿ

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ: ಭಾರತದಲ್ಲಿ 100 ವರ್ಷ ಮೇಲ್ಪಟ್ಟ 2.49 ಲಕ್ಷ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಮಹಾರಾಷ್ಟ್ರದ ಪುಣೆ ನಗರದಲ್ಲಿ ಮತದಾರ ಪಟ್ಟಿಗೆ ಹೆಸರನ್ನು ಸೇರಿಸುವ ಕುರಿತಂತೆ ಜನಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಸೈಕಲ್ ರ್‍ಯಾಲಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 1.80 ಕೋಟಿ ಮತದಾರರು 80 ವರ್ಷ ಮೇಲ್ಪಟ್ಟವರು ಎಂದು ಹೇಳಿದ್ದಾರೆ.

ಮತದಾರ ಪಟ್ಟಿಗೆ ಸೇರ್ಪಡೆ ಚಟುವಟಿಕೆ ವೇಗಗೊಳಿಸುವ ಕುರಿತು ಮಾತನಾಡಿದ ಅವರು, ಹಿಮಾಲಯದಿಂದ ದಕ್ಷಿಣದ 6,000 ಕಿಮೀ ಕರಾವಳಿ, ಪಶ್ಚಿಮ ಮತ್ತು ಪೂರ್ವದ ಮರುಭೂಮಿಗಳು ಸೇರಿ ನಮ್ಮ ಪಟ್ಟಿಯಲ್ಲಿ ಸುಮಾರು 2.49 ಲಕ್ಷ ಮತದಾರರು 100 ವರ್ಷ ದಾಟಿದ್ದಾರೆ. ಅವರ ಜೊತೆ ಮಾತನಾಡಿದಾಗ, ಅವರು ತಮ್ಮ ಜೀವನದುದ್ದಕ್ಕೂ ಮತ ಚಲಾಯಿಸುತ್ತಿರುವುದನ್ನು ಕೇಳಿ ಸಮಾಧಾನ ಮತ್ತು ಸಂತೋಷವಾಗುತ್ತದೆ’ಎಂದು ಹೇಳಿದರು.

ಇತ್ತೀಚೆಗೆ ನಿಧನರಾದ ಭಾರತದ ಮೊದಲ ಮತದಾರ 106 ವರ್ಷದ ಶ್ಯಾಮ್ ಸರನ್ ನೇಗಿ ಅವರು ಸಾಯುವ ಮೂರು ದಿನಗಳ ಮೊದಲು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದರು ಎಂದು ಸಿಇಸಿ ಹೇಳಿದರು. ಅಲ್ಲದೆ, ನೇಗಿ ಅವರು ದೇಶದ ಮತದಾರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು