ಭಾನುವಾರ, ಏಪ್ರಿಲ್ 11, 2021
30 °C

ಗಡಿ ರಹಿತ ಯುದ್ಧಕ್ಕೆ ಭಾರತ ಸಜ್ಜಾಗಲಿ: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶವು ಗಡಿರಹಿತ ಯುದ್ಧಕ್ಕೆ ಸನ್ನದ್ಧವಾಗಬೇಕಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದಾರೆ.

ಭಾರತೀಯ ರಕ್ಷಣಾ ಪಡೆಗಳು 2.5 ಗಡಿಗಳಲ್ಲಿ (ದೇಶದ ಉತ್ತರ ಭಾಗದಲ್ಲಿ, ಪಶ್ಚಿಮ ಭಾಗದಲ್ಲಿ ಹಾಗೂ ಆಂತರಿಕ ಸಂಘರ್ಷದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುವುದಕ್ಕೆ ತಕ್ಕಂತೆ) ಹೋರಾಟ ನಡೆಸುವುದಕ್ಕಾಗಿ ವಿನ್ಯಾಸಗೊಂಡಿವೆ. ಆದರೆ, ಇದು ಈಗ ಅಪ್ರಸ್ತುತ. ಹಾಗಾಗಿ ನಾವು ಗಡಿರಹಿತ ಯುದ್ಧಕ್ಕೆ ಸಿದ್ಧರಾಗಬೇಕಿದೆ ಅವರು ಟ್ವೀಟ್‌ ಮಾಡಿದ್ದಾರೆ.

ಭಾರತ ಭೂ ಪ್ರದೇಶದ ಒಂದು ಇಂಚು ಜಾಗವನ್ನೂ ಕಳೆದುಕೊಂಡಿಲ್ಲ ಎಂದು ಸಂಸತ್ತಿನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸ್ಪಷ್ಟಪಡಿಸಿದ ನಂತರವೂ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ ಮುಂದುವರಿಸಿದ್ದು, ಭಾರತದ ನೆಲವನ್ನು ಚೀನಾಕ್ಕೆ ಬಿಟ್ಟುಕೊಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು