ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಶೀಲ್ಡ್, ಕೋವ್ಯಾಕ್ಸಿನ್ ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ ಐಸಿಎಂಆರ್

Last Updated 26 ಮೇ 2021, 15:15 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರಾಜೆನೆಕಾದ ಕೋವಿಡ್‌ ಲಸಿಕೆ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ ಪರಿಣಾಮಕಾರಿತ್ವದ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಂದಿನ ವಾರದಿಂದ ಅಧ್ಯಯನ ಆರಂಭಿಸಲಿದೆ. ಈ ಕುರಿತು ವಿಜ್ಞಾನಿಯೊಬ್ಬರು ಬುಧವಾರ ಮಾಹಿತಿ ನೀಡಿದ್ದಾರೆ.

ಕೋವಿಡ್ ಲಸಿಕೆ ಹಾಕಿಸಿಕೊಂಡ 45 ವರ್ಷ ಮೇಲ್ಪಟ್ಟ 3000–5000 ಮಂದಿಯನ್ನು ಐಸಿಎಂಆರ್ ಅಧ್ಯಯನಕ್ಕೆ ಒಳಪಡಿಸಲಿದೆ. ಇವರಲ್ಲಿ ಶೇ 80ರಷ್ಟು ಮಂದಿ ಕೋವಿಶೀಲ್ಡ್ ಪಡೆದಿದ್ದು, ಉಳಿದವರು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದಾರೆ.

ಲಸಿಕೆಯು ಸೋಂಕಿನ ತೀವ್ರತೆಯಿಂದ ರಕ್ಷಣೆ ನೀಡುತ್ತಿದೆಯೇ ಎಂಬುದನ್ನು ತಿಳಿಯುವುದೇ ಅಧ್ಯಯನದ ಮುಖ್ಯ ಉದ್ದೇಶ ಎಂದು ಚೆನ್ನೈನಲ್ಲಿರುವ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯಿಂದ (ಎನ್‌ಐಇ) ದೂರವಾಣಿ ಮೂಲಕ ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ತರುಣ್ ಭಟ್ನಗರ್ ತಿಳಿಸಿದ್ದಾರೆ. ಎನ್‌ಐಇ ಅಧ್ಯಯನದ ನೇತೃತ್ವ ವಹಿಸಿಕೊಳ್ಳಲಿದೆ.

‘ಕೋವಿಡ್ ವರದಿ ನೆಗೆಟಿವ್ ಬಂದವರ ಮತ್ತು ಪಾಸಿಟಿವ್ ಬಂದವರ ಹೋಲಿಕೆ ಮಾಡಲಿದ್ದೇವೆ. ಸೋಂಕಿನ ಲಕ್ಷಣಗಳಿದ್ದವರು ಮತ್ತು ತೀವ್ರತೆರನಾದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದವರ ನಡುವೆಯೂ ಹೋಲಿಕೆ ಮಾಡಿ ಅಧ್ಯಯನ ನಡೆಸಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಲಸಿಕೆಯ ಒಂದನೇ ಡೋಸ್ ಪಡೆದವರಲ್ಲಿನ ಪರಿಣಾಮಕಾರಿತ್ವ ಮತ್ತು ಎರಡನೇ ಡೋಸ್ ಪಡೆದವರಲ್ಲಿನ ಪರಿಣಾಮಕಾರಿತ್ವದ ಬಗ್ಗೆಯೂ ತುಲನೆ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT