ನವದೆಹಲಿ:ದೇಶದಲ್ಲಿ ಕೋವಿಡ್–19 ದೃಢಪಟ್ಟ 4,043 ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿವೆ. ಇದರೊಂದಿಗೆ ದೈನಂದಿನ ಸೋಂಕು ಖಚಿತ ಪ್ರಮಾಣಶೇ 1.37ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಸಚಿವಾಲಯ ಇಂದು ಬೆಳಗ್ಗೆ 8ಕ್ಕೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಸಕ್ರಿಯವಾಗಿರುವ ಪ್ರಕರಣಗಳಲ್ಲಿ ತುಸು ಇಳಿಕೆ ಕಂಡುಬಂದಿದೆ. ಸದ್ಯ 47,379 ಸಕ್ರಿಯವಾಗಿವೆ. ಈ ಸಂಖ್ಯೆ ಸೋಮವಾರ 48,027 ರಷ್ಟಿತ್ತು.

ಒಟ್ಟಾರೆ ದೇಶದಾದ್ಯಂತ ಈವರೆಗೆ ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ 4,45,43,089ಕ್ಕೆ ತಲುಪಿದೆ. ಈ ಪೈಕಿ ಕಳೆದ 24 ಗಂಟೆಗಳಲ್ಲಿ ಗುಣಮುಖರಾಗಿರುವ 4,676 ಮಂದಿಯೂ ಸೇರಿದಂತೆ ಈವರೆಗೆ 4,39,67,340 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಹೊಸದಾಗಿ ವರದಿಯಾಗಿರುವ 15 ಸಾವು ಸೇರಿ ಒಟ್ಟು 5,28,370 ಮಂದಿ ಮೃತಪಟ್ಟಿದ್ದಾರೆ.

ದೃಢಪಟ್ಟ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ, ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.11ರಷ್ಟಿದೆ. ಗುಣಮುಖರಾದವರ ಪ್ರಮಾಣ ಶೇ98.71 ರಷ್ಟು ಇದೆ. ದೈನಂದಿನ ಸೋಂಕು ದೃಢ ದರ ಶೇ 1.37 ಮತ್ತು ವಾರದ ಸೋಂಕು ದೃಢ ದರ ಶೇ 1.81 ಆಗಿದೆ ಎಂದು ಸಚಿವಾಲಯ ಹೇಳಿದೆ.

ಸೋಮವಾರ ದೈನಂದಿನ ಸೋಂಕು ದೃಢ ದರ ಶೇ 2.76 ರಷ್ಟಿತ್ತು.

ಇಲಾಖೆಯ ಮಾಹಿತಿ ಪ್ರಕಾರ ಇದುವರೆಗೆ 216.83 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 2020ರ ಆಗಸ್ಟ್ 7 ರಂದು 20 ಲಕ್ಷದ ಗಡಿ ದಾಟಿತ್ತು. ಅದೇ ವರ್ಷದ ಆಗಸ್ಟ್ 23ರಂದು 30 ಲಕ್ಷ, ಸೆಪ್ಟೆಂಬರ್ 5ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16ರಂದು 50 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ನಂತರ ಸೆಪ್ಟೆಂಬರ್ 28, ಅಕ್ಟೋಬರ್ 11, ಅಕ್ಟೋಬರ್ 29 ಹಾಗೂ ನವಂಬರ್ 20ರಂದು ಕ್ರಮವಾಗಿ 60 ಲಕ್ಷ, 70 ಲಕ್ಷ, 80 ಲಕ್ಷ ಹಾಗೂ 90 ಲಕ್ಷ ಪ್ರಕರಣಗಳು ದಾಖಲಾಗಿದ್ದವು.

ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ2020ರ ಡಿಸೆಂಬರ್ 19ರಂದು ಒಂದು ಕೋಟಿ, 2021ರ ಮೇ 4 ರಂದು ಎರಡು ಕೋಟಿ ಹಾಗೂ ಜೂನ್ 23ರಂದು ಮೂರು ಕೋಟಿಗಡಿ ದಾಟಿತ್ತು. ಈ ಸಂಖ್ಯೆಇದೇ ವರ್ಷ (2022) ಜನವರಿ 25ರಂದು ನಾಲ್ಕು ಕೋಟಿಗಿಂತ ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.