ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಲ್ಲಿ ಲಕ್ಷಕ್ಕೂ ಹೆಚ್ಚು ಯೋಧರ, ಸಾವಿರಾರು ಅಧಿಕಾರಿಗಳ ಹುದ್ದೆ ಖಾಲಿ: ಕೇಂದ್ರ

Last Updated 27 ಜುಲೈ 2021, 2:39 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸೇನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯೋಧರ ಮತ್ತು 9 ಸಾವಿರಕ್ಕೂ ಹೆಚ್ಚು ಅಧಿಕಾರಿಗಳ ಹುದ್ದೆ ಖಾಲಿ ಇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭೂಸೇನೆಯಲ್ಲಿ ಹೆಚ್ಚು, ಅಂದರೆ 7,912, ನೌಕಾಪಡೆಯಲ್ಲಿ 1,190 ಮತ್ತು ವಾಯುಪಡೆಯಲ್ಲಿ 610 ಅಧಿಕಾರಿಗಳ ಹುದ್ದೆ ಖಾಲಿ ಇವೆ ಎಂದು ರಕ್ಷಣಾ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಭಟ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ದೇಶದ ಉತ್ತರ ಮತ್ತು ಪೂರ್ವ ಗಡಿಗಳಲ್ಲಿ ಭಾರತೀಯ ಸೇನೆಯು ಚೀನಾ ಸೇನೆಯೊಂದಿಗೆ ಸಂಘರ್ಷದ ವಾತಾವರಣ ಎದುರಿಸುತ್ತಿರುವ ಸಂದರ್ಭದಲ್ಲೇ ಈ ಮಾಹಿತಿ ಬಹಿರಂಗವಾಗಿದೆ.

ಸಶಸ್ತ್ರ ಪಡೆಗಳಿಗೆ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಯಲ್ಲಿ ಸುಧಾರಣೆಗೆ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೆ, ಅಧಿಕಾರಿ ಶ್ರೇಣಿಯನ್ನು ಹೊರತುಪಡಿಸಿ ಸಾಮಾನ್ಯ ಯೋಧರು, ವೈದ್ಯಕೀಯ ಅಧಿಕಾರಿಗಳಂಥ ಹುದ್ದೆಗಳು ಖಾಲಿ ಇವೆ ಎಂದು ಸಚಿವರು ತಿಳಿಸಿದ್ದಾರೆ.

ಸೇನೆಯಲ್ಲಿ ಒಟ್ಟು 1,09,671 ಯೋಧರ ಹುದ್ದೆ ಖಾಲಿ ಇದ್ದು, ಈ ಪೈಕಿ ಭೂ ಸೇನೆಯಲ್ಲಿ 90,640, ನೌಕಾಪಡೆಯಲ್ಲಿ 11,927 ಹಾಗೂ ವಾಯುಪಡೆಯಲ್ಲಿ 7,104 ಹುದ್ದೆ ಖಾಲಿ ಇವೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯದಲ್ಲಿ (ಅಧಿಕಾರಿ ಶ್ರೇಣಿ) 444 ಅಧಿಕಾರಿ ಹುದ್ದೆ ಮತ್ತು 694 ಶುಶ್ರೂಷಕಿಯರ ಹುದ್ದೆ ಖಾಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT