ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಭಾರತವು ಇಸ್ರೇಲ್ ಮಾದರಿಯ ಭಯೋತ್ಪಾದನೆ ನಿಗ್ರಹ ತಂತ್ರ ಅಳವಡಿಸಿಕೊಳ್ಳಲಿ: ಸಿಟಿ ರವಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಪಣಜಿ: ಭಾರತವು ಇಸ್ರೇಲ್‌ ಮಾದರಿಯ ಭಯೋತ್ಪಾದನೆ ನಿಗ್ರಹ ತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ರವಿ, ʼದೇಶವನ್ನು ಭಯೋತ್ಪಾದಕ ಸಂಘಟನೆ ಹಿಡಿತಕ್ಕೆ ಪಡೆದುಕೊಂಡಿರುವುದು ನೋವಿನ ಸಂಗತಿʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ʼನನ್ನ ಪ್ರಕಾರ ನಾವು ಇಸ್ರೇಲ್‌ನ ಭಯೋತ್ಪಾದನೆ ನಿಗ್ರಹ ರಣತಂತ್ರವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ದೇಶ ಸುರಕ್ಷಿವಾಗಿರಲಿದೆ. ತಾಲಿಬಾನ್‌ ಸಂಘಟನೆ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.‌ ಅಷ್ಟಲ್ಲದೆ ಅವರು ಖಲಿಸ್ತಾನ ಬೆಂಬಲಿಗರನ್ನು ಪ್ರಚೋಧಿಸುವ ಸಾಧ್ಯತೆಯೂ ಇದೆ. ಆದರೆ, ಕೇಂದ್ರ ಸರ್ಕಾರವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ದೇಶದ ಸುರಕ್ಷತೆಯನ್ನು ಶೇ.100ರಷ್ಟು ಖಾತ್ರಿ ಪಡಿಸುತ್ತದೆʼ ಎಂದು ಭರವಸೆ ನೀಡಿದ್ದಾರೆ.

ʼನಮ್ಮಲ್ಲಿ ಸಾಕಷ್ಟು ನುಸುಳುಕೋರರು ಮತ್ತು ದೇಶ ವಿರೋಧಿ ಶಕ್ತಿಗಳಿವೆ. ಅವನ್ನು ನಿಯಂತ್ರಿಸುವುದು ಸವಾಲಿನ ಸಂಗತಿ ಎಂದೂ ಹೇಳಿದ್ದಾರೆ.

ಭಾನುವಾರ ಕಾಬೂಲ್‌ ಪ್ರವೇಶಿಸಿರುವ ತಾಲಿಬಾನ್‌, ಅಧ್ಯಕ್ಷರ ಅರಮನೆಯನ್ನು ವಶಕ್ಕೆ ಪಡೆದಿದೆ. ಇದೀಗ ತಾಲಿಬಾನ್‌ ನಾಯಕರು ಅಫ್ಗಾನಿಸ್ತಾನ ಅಡಳಿತದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

ಇವನ್ನೂ ಓದಿ
ʼಅಫ್ಗಾನಿಸ್ತಾನದ ಸ್ವಾತಂತ್ರ್ಯಕ್ಕಾಗಿ ತಾಲಿಬಾನ್‌ ಹೋರಾಟʼ ಎಂದ ಎಸ್‌ಪಿ ಸಂಸದ
ಅಫ್ಗನ್‌ನಲ್ಲಿ 20 ವರ್ಷಗಳ ಸುದೀರ್ಘ ರಕ್ತಸಿಕ್ತ ಅಧ್ಯಾಯ ಅಂತ್ಯಕ್ಕೆ ಬದ್ಧ: ಬೈಡನ್
ಅಫ್ಗಾನಿಸ್ತಾನದಲ್ಲಿ ಅಮೆರಿಕದ ಪಾತ್ರವೇನು? ಇಲ್ಲಿದೆ 20 ವರ್ಷಗಳ ‘ರಕ್ತ ಚರಿತ್ರೆ’
​* 

​* 

​* 

​* 
*​ 

    ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು