ಸೋಮವಾರ, ಜನವರಿ 24, 2022
29 °C

ಅಫ್ಗಾನಿಸ್ತಾನಕ್ಕೆ 5 ಲಕ್ಷ ಕೋವ್ಯಾಕ್ಸಿನ್‌ ಡೋಸ್‌ಗಳನ್ನು ಪೂರೈಸಿದ ಭಾರತ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾನವೀಯತೆ ಸಹಕಾರದ ದೃಷ್ಟಿಯಿಂದ ಅಫ್ಗಾನಿಸ್ತಾನಕ್ಕೆ ಶನಿವಾರ 5 ಲಕ್ಷ ಕೋವ್ಯಾಕ್ಸಿನ್‌ ಡೋಸ್‌ಗಳನ್ನು ಪೂರೈಕೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕಾಬೂಲ್‌ನಲ್ಲಿರುವ ಇಂದಿರಾ ಗಾಂಧಿ ಆಸ್ಪತ್ರೆಗೆ ಡೋಸ್‌ಗಳನ್ನು ಕಳುಹಿಸಲಾಗಿದೆ. ಮತ್ತೊಂದು ಸುತ್ತಿನಲ್ಲಿ ಮುಂದಿನ ವಾರ 5 ಲಕ್ಷ ಡೋಸ್‌ಗಳನ್ನು ಕಳುಹಿಸಲಾಗುವುದು. ಮುಂಬರುವ ವಾರಗಳಲ್ಲಿ ಗೋಧಿ ಮತ್ತು ಉಳಿದ ವೈದ್ಯಕೀಯ ಉತ್ಪನ್ನಗಳನ್ನು ಕಳುಹಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಮಾನವೀಯತೆ ಸಹಕಾರದ ನೆಲೆಯಲ್ಲಿ ಆಫ್ಗನ್‌ ಪ್ರಜೆಗಳಿಗೆ ಆಹಾರ ಧಾನ್ಯಗಳು, 10 ಲಕ್ಷ ಕೋವಿಡ್‌ ಡೋಸ್‌ಗಳು ಮತ್ತು ಪ್ರಮುಖ ಔಷಧಿಗಳನ್ನು ಪೂರೈಸುವುದಾಗಿ ಭಾರತ ಭರವಸೆ ನೀಡಿತ್ತು.

ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಕಳೆದ ತಿಂಗಳು 1.6 ಟನ್‌ ವೈದ್ಯಕೀಯ ಉತ್ಪನ್ನಗಳನ್ನು ಭಾರತ ಕಳುಹಿಸಿತ್ತು.

ಕಳೆದ ವರ್ಷ ಜನವರಿಯಲ್ಲಿ ಆರಂಭಿಸಿದ್ದ 'ಲಸಿಕೆ ಮೈತ್ರಿ' ಕಾರ್ಯಕ್ರಮದಡಿ ಇದುವರೆಗೆ ಭಾರತ 94 ರಾಷ್ಟ್ರಗಳಿಗೆ ಸುಮಾರು 723 ಲಕ್ಷ ಕೋವಿಡ್‌ ಡೋಸ್‌ಗಳನ್ನು ಪೂರೈಸಿದೆ. ಕೋವಿಡ್‌ಗೆ ಸಂಬಂಧಿಸಿದ ವೈದ್ಯಕೀಯ ಮತ್ತು ಇತರ ಉತ್ಪನ್ನಗಳನ್ನು 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕಳುಹಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು