ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸೇನೆಗೆ ಹೊಸ ಸಮವಸ್ತ್ರ: ಹಲವು ವೈಶಿಷ್ಟ್ಯಗಳು

Last Updated 16 ಜನವರಿ 2022, 6:05 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಸೇನಾ ದಿವಸದ ಅಂಗವಾಗಿ ನಡೆದ ಪರೇಡ್‌ನಲ್ಲಿ ಭಾಗವಹಿಸಿದ್ದ ಯೋಧರು ಧರಿಸಿದ್ದ ಹೊಸ ಸಮವಸ್ತ್ರ ಎಲ್ಲರ ಗಮನ ಸೆಳೆದಿದೆ.

ನೂತನ ಸಮವಸ್ತ್ರ ಹೆಚ್ಚು ಆರಾಮದಾಯಕ, ಪರಿಸರ ಸ್ನೇಹಿ ಮತ್ತು ಆಕರ್ಷಕ ವಿನ್ಯಾಸ ಹೊಂದಿದೆ. ಶನಿವಾರ ನಡೆದ ಪರೇಡ್‌ನಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಯೋಧರು ಹೊಸ ಸಮವಸ್ತ್ರ ಧರಿಸಿದ್ದರು.

ಯೋಧರು ಕಾರ್ಯನಿರ್ವಹಿಸುವ ತಾಣ ಮತ್ತು ಅಲ್ಲಿನ ಯಾವುದೇ ವಾತಾವರಣಕ್ಕೆ ಪೂರಕವಾಗುವಂತೆ ನೂತನ ಸಮವಸ್ತ್ರ ವಿನ್ಯಾಸ ಮಾಡಲಾಗಿದ್ದು, ಡಿಜಿಟಲ್ ಕಣ್ಗಾವಲು ವ್ಯವಸ್ಥೆಗೂ ಸುಲಭದಲ್ಲಿ ನಿಲುಕುವುದಿಲ್ಲ.

ಆಲಿವ್ ಮತ್ತು ಆರ್ತ್‌ನ್ ಮಿಶ್ರಣದ ಹಾಗೂ ವಿವಿಧ ರಾಷ್ಟ್ರಗಳ ಸೇನೆಯ ಯೋಧರ ಸಮವಸ್ತ್ರವನ್ನು ಅಧ್ಯಯನ ಮಾಡಿ, ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಹಯೋಗದಲ್ಲಿ ಹೊಸ ವಿನ್ಯಾಸ ಅಭಿವೃದ್ಧಿಪಡಿಸಲಾಗಿದೆ.

ಸೇನಾ ಬಳಕೆಗಾಗಿ ಮಾತ್ರ ನೂತನ ಸಮವಸ್ತ್ರ ಲಭ್ಯವಾಗಲಿದ್ದು, ಮುಕ್ತಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT