ಚೀನಾ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲು ಇಸ್ರೇಲ್, ಅಮೆರಿಕದಿಂದ ಡ್ರೋನ್‌ಗಳ ಖರೀದಿ

ನವದೆಹಲಿ: ಪೂರ್ವ ಲಡಾಖ್, ಚೀನಾ ಗಡಿಯಲ್ಲಿನ ಕಣ್ಗಾವಲು ವ್ಯವಸ್ಥೆ ಬಲಪಡಿಸುವ ಮತ್ತು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವತ್ತ ಮಹತ್ತರವಾದ ಹೆಜ್ಜೆ ಇಟ್ಟಿರುವ ಭಾರತವು ಇಸ್ರೇಲ್‌ನಿಂದ ಹೆರೊನ್ ಮತ್ತು ಅಮೆರಿಕದಿಂದ ಮಿನಿ ಡ್ರೋನ್‌ಗಳನ್ನು ಖರೀದಿಸುತ್ತಿದೆ.
ಇಸ್ರೇಲ್‌ನ ಹೆರೊನ್ ಕಣ್ಗಾವಲು ಡ್ರೋನ್‌ಗಳ ಖರೀದಿ ಪ್ರಕ್ರಿಯೆಯು ಅಂತಿಮ ಘಟ್ಟದಲ್ಲಿದ್ದು, ಡಿಸೆಂಬರ್‌ನಲ್ಲಿ ಸೇನೆ ತೆಕ್ಕೆಗೆ ಸೇರುವ ಸಾಧ್ಯತೆಗಳಿವೆ. ಲಾಡಾಖ್ ವಲಯದಲ್ಲಿ ಹೆರೊನ್ ಡ್ರೋನ್‌ಗಳನ್ನು ನಿಯೋಜಿಸಲಾಗುತ್ತದೆ. ಕಣ್ಗಾವಲು ವ್ಯವಸ್ಥೆಗೆ ಭಾರತದ ಬತ್ತಳಿಕೆಯಲ್ಲಿರುವ ಉಪಕರಣಗಳಿಗಿಂತಲೂ ಹೆರೊನ್ ಡ್ರೋನ್‌ಗಳು ಅತ್ಯಾಧುನಿಕವಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಅಮೆರಿಕದಿಂದ ಖರೀದಿಸಲಾಗುತ್ತಿರುವ ಸಣ್ಣ ಅಥವಾ ಮಿನಿ ಡ್ರೋನ್‌ಗಳನ್ನು ಬೆಟಾಲಿಯನ್ ಮಟ್ಟದಲ್ಲಿ ಭೂ ದಳದ ಸೈನಿಕರಿಗೆ ನೀಡಲಾಗುತ್ತದೆ. ರಿಮೋಟ್ ಚಾಲಿತ ಡ್ರೋನ್‌ಗಳನ್ನು ಸೈನಿಕರಿರುವ ಪ್ರದೇಶದ ಬಗ್ಗೆ ಮಾಹಿತಿಗಾಗಿ ಬಳಸಲಾಗುತ್ತದೆ ಎನ್ನಲಾಗಿದೆ.
ರಕ್ಷಣಾ ಪಡೆಗಳಿಗೆ ಕೇಂದ್ರ ಸರ್ಕಾರದಿಂದ ನೀಡಲಾಗುವ ತುರ್ತು ಆರ್ಥಿಕ ನೆರವಿನ ಅಡಿಯಲ್ಲಿ ಈ ಡ್ರೋನ್‌ಗಳನ್ನು ಖರೀದಿಸಲಾಗುತ್ತಿದೆ. ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದ ಮಧ್ಯೆ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲು ₹500 ಕೋಟಿ ಮೌಲ್ಯದ ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಪಡೆಯಲಾಗುತ್ತಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.