ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3.5 ಕಿ.ಮೀ.ಉದ್ದದ ಸರಕು ಸಾಗಣೆ ರೈಲು ಸಂಚಾರ ಯಶಸ್ವಿ

Last Updated 16 ಆಗಸ್ಟ್ 2022, 14:12 IST
ಅಕ್ಷರ ಗಾತ್ರ

ನವದೆಹಲಿ: ಸುಮಾರು 3.5 ಕಿ.ಮೀ.ನಷ್ಟು ಉದ್ದನೆಯ ಸರಕುಸಾಗಣೆ ರೈಲು ‘ಸೂಪರ್‌ ವಾಸುಕಿ’ಯ ಪ್ರಾಯೋಗಿಕ ಸಂಚಾರವನ್ನು ರೈಲ್ವೆ ಇಲಾಖೆಯು ಸ್ವಾತಂತ್ರ್ಯ ದಿನದಂದು ಅಮೃತ ಸ್ವಾತಂತ್ರ್ಯೋತ್ಸವದ ಭಾಗವಾಗಿ ಯಶಸ್ವಿಯಾಗಿ ನಡೆಸಿತು.

ಈ ರೈಲಿನಲ್ಲಿ ಸರಕು ಭರ್ತಿಯಾದ 295 ವ್ಯಾಗನ್‌ಗಳು ಇದ್ದು, ಒಟ್ಟಾರೆ 27,000 ಟನ್‌ ಕಲ್ಲಿದ್ದಲು ಸಾಗಣೆ ಮಾಡಿತು. ಈ ಲೈಲಿಗೆ ಐದು ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ. ರೈಲು ಛತ್ತೀಸಗಡದಲ್ಲಿ ಭಿಲಾಯಿಯಿಂದ ಕೊರ್ಬಾಗೆ ಸಂಚರಿಸಿದ್ದು, ನಿಲ್ದಾಣದಿಂದ ನಿರ್ಗಮಿಸಲು 4 ನಿಮಿಷ ತೆಗೆದುಕೊಂಡಿತು.

ಬಿಲಾಸ್‌ಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಗ್ನೇಯ ಕೇಂದ್ರ ರೈಲ್ವೆಯು ಇದರ ನಿರ್ವಹಣೆ ಮಾಡಲಿದೆ. ರೈಲ್ವೆ ಇಲಾಖೆಯು ಹೀಗೇ ಒಂದೇ ರೈಲಿನಲ್ಲಿ ಅತ್ಯಧಿಕ ಪ್ರಮಾಣ, ತೂಕದ ಇಂಧನ ಸಾಗಣೆ ಮಾಡಿರುವುದು ದಾಖಲೆಯಾಗಿದೆ ಎಂದು ರೈಲ್ವೆ ಇಲಾಖೆಯ ಹೇಳಿಕೆಯಲ್ಲಿ ತಿಳಿಸಿದೆ.

ರೈಲ್ವೆ ಇಲಾಖೆಯು ಕಳೆದ ವರ್ಷವೂ ವಾಸುಕಿ ಮತ್ತು ತ್ರಿಶೂಲ್ ಹೆಸರಿನಲ್ಲಿ ಉದ್ದನೆಯ ರೈಲು ಸಂಚಾರ ನಡೆಸಿತ್ತು. ಇವುಗಳ ಒಟ್ಟು ಉದ್ದ 2.8 ಕಿ.ಮೀ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT