ಶುಕ್ರವಾರ, ಮೇ 7, 2021
22 °C
11 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳು

ಕೋವಿಡ್-19‌: ದೇಶದಲ್ಲಿ ಹೊಸದಾಗಿ1.52 ಲಕ್ಷ ಪ್ರಕರಣ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಮತ್ತೆ ಹೆಚ್ಚಾಗಿದ್ದು, ಹೊಸದಾಗಿ 1,52,879 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ, ಸಕ್ರಿಯ ಪ್ರಕರಣಗಳ ಸಂಖ್ಯೆ 11 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

ಕೊರೊನಾ ವೈರಸ್‌ ಸೊಂಕು ಹಬ್ಬಿದ ಬಳಿಕ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 11 ಲಕ್ಷ ದಾಟಿದೆ. ಫೆಬ್ರುವರಿ 12ರಂದು 1.35 ಲಕ್ಷ ಸಕ್ರಿಯ ಪ್ರಕರಣಗಳಿದ್ದವು. 2020ರ ಸೆಪ್ಟೆಂಬರ್‌ 18ರಂದು 10.17 ಲಕ್ಷ ಸಕ್ರಿಯ ಪ್ರಕರಣಗಳಿದ್ದವು ಎಂದು ಸಚಿವಾಲಯ ವಿವರಿಸಿದೆ.

ಇದುವರೆಗೆ ಕೋವಿಡ್‌–19 ಒಟ್ಟು ಪ್ರಕರಣಗಳ ಸಂಖ್ಯೆ 1.33 ಕೋಟಿಗೆ ತಲುಪಿದೆ. ದೇಶದಲ್ಲಿ ಮತ್ತೆ 839 ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. 2020ರ ಅಕ್ಟೋಬರ್‌ 18ರ ಬಳಿಕ ಅತಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ಸತತ 32ನೇ ದಿನ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಜತೆಗೆ, ಗುಣಮುಖರಾಗುವವರ ಸಂಖ್ಯೆಯಲ್ಲೂ ಕಡಿಮೆಯಾಗುತ್ತಿದೆ. ಗುಣಮುಖರಾಗುವವರ ಪ್ರಮಾಣ ಶೇಕಡ 90.44ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಇದುವರೆಗೆ ಸೋಂಕಿಗೆ ಒಳಗಾದ 1.20 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಕೋವಿಡ್‌–19 ಪ‍್ರಕರಣಗಳ ಸಂಖ್ಯೆ ಆಗಸ್ಟ್‌ 7ರಂದು 20 ಲಕ್ಷ ದಾಟಿತ್ತು. ನಂತರ ಏರಿಕೆ ಪ್ರಮಾಣ ಕಂಡಿತ್ತು. ಸೆಪ್ಟೆಂಬರ್‌ 5ರಂದು 40 ಲಕ್ಷ, ಸೆಪ್ಟೆಂಬರ್‌ 16ರಂದು 50 ಲಕ್ಷ ಮತ್ತು ಸೆಪ್ಟೆಂಬರ್‌ 28ರಂದು 60 ಹಾಗೂ ಅಕ್ಟೋಬರ್‌11ರಂದು 70 ಲಕ್ಷಕ್ಕೂ ಹೆಚ್ಚು ದಾಟಿತ್ತು. ಬಳಿಕ, ಡಿಸೆಂಬರ್‌ 19ರಂದು ಒಂದು ಕೋಟಿ ದಾಟಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು