ಬುಧವಾರ, ಮಾರ್ಚ್ 29, 2023
30 °C

ಮೂಗಿನ ಮೂಲಕ ನೀಡಬಹುದಾದ ‘ಇನ್‌ಕೊವ್ಯಾಕ್’ ಕೋವಿಡ್ ಲಸಿಕೆ ಬಿಡುಗಡೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಮೂಗಿನ ಮೂಲಕ ನೀಡಬಹುದಾದ ‘ಇನ್‌ಕೊವ್ಯಾಕ್’ ಕೋವಿಡ್ ಲಸಿಕೆಯನ್ನು ಕೇಂದ್ರದ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಗುರುವಾರ ಬಿಡುಗಡೆ ಮಾಡಿದರು.

ಭಾರತ್‌ ಬಯೊಟೆಕ್‌ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾರತ್‌ ಬಯೊಟೆಕ್‌ ಕಂಪನಿ ಕಂಪನಿಯ ಅಧ್ಯಕ್ಷ ಕೃಷ್ಣ ಎಲ್ಲಾ ಇದ್ದರು. 

ಈ ಹಿಂದೆ, ಭಾರತೀಯ ಔಷಧ ನಿಯಂತ್ರಕ (ಡಿಸಿಜಿಐ) ಹಾಗೂ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಲಸಿಕೆಯ ಟ್ರಯಲ್‌ಗೆ ಅನುಮೋದನೆ ನೀಡಿತ್ತು. ಇದೀಗ ಲಸಿಕೆ ಬಳಕೆಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. 

ಪ್ರಾಥಮಿಕ ಸರಣಿ ಹಾಗೂ ಬೂಸ್ಟರ್‌ ಹಂತದಲ್ಲಿ ಬಳಸಲು ಅನುಮೋದನೆ ಪಡೆದ ಮೂಗಿನ ಮೂಲಕ ನೀಡಬಹುದಾದ ಮೊದಲ ಲಸಿಕೆ ಇದಾಗಿದೆ ಎಂದು ಭಾರತ್ ಬಯೊಟೆಕ್‌ ತಿಳಿಸಿದೆ. ಇದನ್ನು ದೇಶಿಯವಾಗಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ. 

ದೆಹಲಿಯ ಎಐಐಎಂಎಸ್‌ ಸೇರಿದಂತೆ ದೇಶದ ಆಯ್ದ ಐದು ಕೇಂದ್ರಗಳಲ್ಲಿ ಈ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ನಡೆದಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು