ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಕಾರ್ಮಿಕ ಚಳವಳಿ ಇತಿಹಾಸ ತಿಳಿಸುವ ಮ್ಯೂಸಿಯಂ ಸ್ಥಾಪನೆ

ದೇಶದಲ್ಲಿಯೇ ಮೊಟ್ಟಮೊದಲ ಪ್ರಯತ್ನ
Last Updated 17 ಜನವರಿ 2021, 15:54 IST
ಅಕ್ಷರ ಗಾತ್ರ

ಕೊಚ್ಚಿ: ಕಾರ್ಮಿಕ ಚಳವಳಿ ನಡೆದು ಬಂದ ಹಾದಿಯನ್ನು ಕಟ್ಟಿಕೊಡುವ ಮೊಟ್ಟ ಮೊದಲ ಮ್ಯೂಸಿಯಂ ಕೇರಳದ ಅಳಪ್ಪುಳದಲ್ಲಿ ಅಸ್ತಿತ್ವಕ್ಕೆ ಬರಲಿದೆ.

ಕಾರ್ಮಿಕ ಚಳವಳಿ ನಡೆದು ಬಂದ ದಾರಿ, ಅದಕ್ಕೆ ಸಂಬಂಧಿಸಿದ ದಾಖಲೆಗಳು, ಚಿತ್ರಗಳನ್ನು ಈ ಮ್ಯೂಸಿಯಂ ಹೊಂದಿರಲಿದೆ. ಅಳಪ್ಪುಳ ನಗರವನ್ನು ಕೇರಳದ ಕಾರ್ಮಿಕ ಚಳವಳಿಯ ತೊಟ್ಟಿಲು ಎಂದೇ ಕರೆಯಲಾಗುತ್ತದೆ. ಹೀಗಾಗಿ ಇಲ್ಲಿಯೇ ಮ್ಯೂಸಿಯಂ ಸ್ಥಾಪಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ತಿಳಿಸಿದೆ.

ಅಳಪ್ಪುಳದಲ್ಲಿ ಈಗಾಗಲೇ ಬಂದರು ಹಾಗೂ ತೆಂಗಿನನಾರು ಕುರಿತ ಮ್ಯೂಸಿಯಂಗಳಿವೆ. ಈಗ ಕಾರ್ಮಿಕ ಚಳವಳಿ ಮ್ಯೂಸಿಯಂ ಸ್ಥಾಪನೆಯೊಂದಿಗೆ ನಗರದ ಖ್ಯಾತಿಗೆ ಮತ್ತೊಂದು ಗರಿ ಸೇರಲಿದೆ ಎಂದೂ ಇಲಾಖೆ ಹೇಳಿದೆ.

ಇಲ್ಲಿರುವ ನ್ಯೂ ಮಾಡೆಲ್ ಕೋ–ಆಪರೇಟಿವ್‌ ಸೊಸೈಟಿ ಕಟ್ಟಡವನ್ನು ಮ್ಯೂಸಿಯಂ ಅಗಿ ಪರಿವರ್ತಿಸಲಾಗುವುದು. ಎಲ್‌ಡಿಎಫ್‌ ನೇತೃತ್ವದ ಸರ್ಕಾರ ಎರಡನೇ ಬಾರಿ ಅಸ್ತಿತ್ವಕ್ಕೆ ಬಂದ ನಂತರ ಆರಂಭಿಸಿರುವ 100 ದಿನಗಳ ಕಾರ್ಯಕ್ರಮದ ಭಾಗವಾಗಿ ಈ ಮ್ಯೂಸಿಯಂ ಅನ್ನು ಉದ್ಘಾಟಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT