ಶುಕ್ರವಾರ, ಮೇ 20, 2022
27 °C

ಉತ್ತರ ಪ್ರದೇಶ: ಎಸ್‌ಪಿ ಸೇರಿದ ಭಾರತದ ಅತಿ ಎತ್ತರದ ಮನುಷ್ಯ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಲಖನೌ: ದೇಶದ ಅತಿ ಎತ್ತರದ ವ್ಯಕ್ತಿ ಎನಿಸಿಕೊಂಡಿರುವ ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯ ಧರ್ಮೇಂದ್ರ ಪ್ರತಾಪ್ ಸಿಂಗ್ ಅವರು ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಶನಿವಾರ ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಸೇರ್ಪಡೆಯಾದರು. ಅವರು 8 ಅಡಿ 1 ಇಂಚು ಎತ್ತರವಿದ್ದಾರೆ. 

ಪಕ್ಷದ ಪರವಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸುವುದಾಗಿ ಪ್ರತಾಪ್ ಸಿಂಗ್ ಅವರು ಪ್ರಕಟಿಸಿದ್ದಾರೆ. ‘ಸಮಾಜವಾದಿ ಪಕ್ಷದ ನೀತಿಗಳು ಹಾಗೂ ಕಾರ್ಯಕ್ರಮಗಳಿಂದ ಪ್ರೇರಿತನಾಗಿ ಪಕ್ಷ ಸೇರಿದ್ದೇನೆ. ಅಖಿಲೇಶ್ ಅವರು ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲಿದ್ದಾರೆ’ ಎಂದು ಹೇಳಿದ್ದಾರೆ.

ಅವಿವಾಹಿತರಾಗಿರುವ 46 ವರ್ಷದ ಪ್ರತಾಪ್‌ ಸಿಂಗ್ ಅವರಿಗೆ ಈಗಲೂ ಉದ್ಯೋಗ ಸಿಕ್ಕಿಲ್ಲ. ತಮ್ಮ ಕುಟುಂಬದವರು ಹಾಗೂ ಸ್ನೇಹಿತರು ಸಾಕಷ್ಟು ಹುಡುಕಾಡಿದರೂ, ತಮಗೆ ಹೊಂದಿಕೆಯಾಗುವ ಜೋಡಿ ಸಿಕ್ಕಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. 

ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಪ್ರತಾಪ್, ಎತ್ತರದ ನಿಲುವಿನಿಂದಾಗಿ ಹೋದ ಕಡೆಯೆಲ್ಲಾ ಜನರಿಂದ ಗುರುತಿಸಿಕೊಳ್ಳುತ್ತಾರೆ. ಜನರು ಇವರನ್ನು ಸುತ್ತುವರಿದು ಸೆಲ್ಫಿ ತೆಗೆದುಕೊಳ್ಳುತ್ತಾರೆ. 

‘ಸಮಾಜದ ಎಲ್ಲ ವರ್ಗಗಳಿಗೂ ನೋವುಂಟು ಮಾಡಿರುವ ಬಿಜೆಪಿಯ ದೋಷಪೂರಿತ ನೀತಿಗಳ ಬಗ್ಗೆ ಜನಜಾಗೃತಿ ಮೂಡಿಸುತ್ತೇನೆ’ ಎಂದು ‘ಲಂಬೂಜಿ’ ಹೇಳಿದ್ದಾರೆ. 

ಪ್ರತಾಪ್ ಸಿಂಗ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದ್ದು, ಅವರನ್ನು ಪಕ್ಷದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನರೇಶ್ ಉತ್ತಮ್ ತಿಳಿಸಿದ್ದಾರೆ.

ಎತ್ತರದ ವ್ಯಕ್ತಿಯ ಸೇರ್ಪಡೆಯಿಂದ ಚುನಾವಣಾ ಕಣದಲ್ಲಿ ಸಮಾಜವಾದಿ ಪಕ್ಷವು ಎತ್ತರದ ಸ್ಥಾನಕ್ಕೆ ಹೋಗಲಿದೆಯೇ ಎಂದು ಕಾದುನೋಡಬೇಕಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು