ಗುರುವಾರ , ಜನವರಿ 21, 2021
23 °C

ಇಂಡಿಗೊ: ಇನ್ನೂ 7 ನಗರಕ್ಕೆ ವಿಮಾನಯಾನ ಸೇವೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲೇಹ್, ದರ್ಭಂಗಾ, ಆಗ್ರಾ, ಕರ್ನೂಲ್, ಬರೇಲಿ, ದುರ್ಗಾಪುರ ಮತ್ತು ರಾಜ್‌ಕೋಟ್‌ಗೆ ಸಂಪರ್ಕ ಕಲ್ಪಿಸುವ ಹೊಸ ವಿಮಾನಯಾನಗಳನ್ನು ಪ್ರಾರಂಭಿಸಲು ಇಂಡಿಗೊ ನಿರ್ಧರಿಸಿದೆ.

ಫೆಬ್ರುವರಿ, ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಕ್ರಮವಾಗಿ ಲೇಹ್‌–ದರ್ಭಂಗಾ, ಕರ್ನೂಲ್‌–ಆಗ್ರಾ, ಬರೇಲಿ–ದುರ್ಗಾಪುರ, ರಾಜ್‌ಕೋಟ್‌ಗೆ ವಿಮಾನ ಸೇವೆಯನ್ನು ಆರಂಭಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಇಂಡಿಗೊ ಹೇಳಿದೆ.

ಎಲ್ಲಾ ರೀತಿಯ ಅನುಮತಿ ದೊರೆತ ಬಳಿಕ ವಿಮಾನಗಳ ವೇಳಾಪಟ್ಟಿಯನ್ನು ನಿರ್ಧರಿಸಲಾಗುವುದು ಎಂದು ತಿಳಿಸಲಾಗಿದೆ.

ಸದ್ಯ ಇಂಡಿಗೊ ದೇಶಿಯವಾಗಿ 61 ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಹೊಸ ವಿಮಾನಯಾನಗಳೊಂದಿಗೆ ಇದರ ಸಂಖ್ಯೆ 68ಕ್ಕೆ ಏರಿಕೆಯಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು