ಶುಕ್ರವಾರ, ಡಿಸೆಂಬರ್ 3, 2021
24 °C

ವರ್ಷಾಂತ್ಯಕ್ಕೆ ಅಂತರರಾಷ್ಟ್ರೀಯ ವಿಮಾನ ಸೇವೆಗಳು ಸಹಜ ಸ್ಥಿತಿಗೆ: ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವರ್ಷಾಂತ್ಯಕ್ಕೆ ಅಂತರರಾಷ್ಟ್ರೀಯ ವಿಮಾನ ಸೇವೆಗಳು ಸಹಜ ಸ್ಥಿತಿಗೆ ತಲುಪುವ ನಿರೀಕ್ಷೆ ಇರುವುದಾಗಿ ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್‌ ಬನ್ಸಾಲ್‌ ಬುಧವಾರ ಹೇಳಿದ್ದಾರೆ. 

ಕೊರೊನಾ ವೈರಸ್‌ ಸಾಂಕ್ರಾಮಿಕದ ಕಾರಣ ಕಳೆದ ವರ್ಷ ಮಾರ್ಚ್‌ನಿಂದ ವಿದೇಶದಿಂದ ಭಾರತಕ್ಕೆ ಬರುವ ಮತ್ತು ಹೊರ ದೇಶಗಳಿಗೆ ಪ್ರಯಾಣಿಸುವ ನಾಗರಿಕ ವಿಮಾನ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ನಡೆಸಲು 25ಕ್ಕೂ ಹೆಚ್ಚು ರಾಷ್ಟ್ರಗಳೊಂದಿಗೆ ಭಾರತವು ಏರ್‌ ಬಬಲ್‌ ವ್ಯವಸ್ಥೆ ಹೊಂದಿದೆ.

ಜಾಗತಿಕವಾಗಿ ನಿಗದಿತ ಎಲ್ಲ ಮಾರ್ಗಗಳಲ್ಲಿಯೂ ವಿಮಾನ ಸೇವೆಗಳು ಸಹಜ ಸ್ಥಿತಿಗೆ ಮರಳುವ ಬಗ್ಗೆ ರಾಜೀವ್‌ ಬನ್ಸಾಲ್‌ ಪ್ರತಿಕ್ರಿಯಿಸಿದ್ದು, ಅಂತರರಾಷ್ಟ್ರೀಯ ವಿಮಾನ ಸೇವೆಗಳು ಶೀಘ್ರದಲ್ಲೇ ಸಹಜವಾಗಿ ನಡೆಯುವ ನಿರೀಕ್ಷೆಯಿದೆ, 'ಈ ವರ್ಷದ ಅಂತ್ಯಕ್ಕೆ' ಆಗಬಹುದು ಎಂದಿದ್ದಾರೆ.

ಏರ್‌ ಬಬಲ್‌ ವ್ಯವಸ್ಥೆ ಇರುವ ಎರಡು ರಾಷ್ಟ್ರಗಳ ನಡುವೆ ನಿಗದಿತ ಅಂತರರಾಷ್ಟ್ರೀಯ ವಿಮಾನಗಳು ಉಭಯ ವಲಯಗಳಲ್ಲಿ ಕಾರ್ಯಾಚರಣೆ ನಡೆಸಬಹುದಾಗುತ್ತದೆ, ಅದು ಕೆಲವು ಷರತ್ತುಗಳನ್ನು ಒಳಗೊಂಡಿರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು