ಗುರುವಾರ , ನವೆಂಬರ್ 26, 2020
21 °C

ಇಸ್ರೋದಿಂದ ಉಪಗ್ರಹ ಯಶಸ್ವಿ ಉಡಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಇಂದು ಪಿಎಸ್‌ಎಲ್‌ವಿ ಸರಣಿಯ 51ನೇ ರಾಕೆಟ್‌ ಉಡಾವಣೆ ಮಾಡಿತು. ಪಿಎಸ್‌ಎಲ್‌ವಿ ಸಿ49, ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಯ ಉದ್ದೇಶಿತ ಇಒಎಸ್‌–01 ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಹೊತ್ತು ಸಾಗಿದೆ.

ಉಳಿದ 9 ಉಪಗ್ರಹಗಳಲ್ಲಿ 1 ಲಿಥುವೇನಿಯಾ, 4 ಲುಕ್ಸಂಬರ್ಗ್‌ ಮತ್ತು 4 ಯುಎಸ್‌ನ ಉಪಗ್ರಹಗಳಾಗಿವೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 3.12ರ ವೇಳೆ ಉಪ್ರಗ್ರಹ ಉಡಾವಣೆ ಮಾಡಲಾಗಿದ್ದು, ಇದು ಇಸ್ರೋ ಈ ವರ್ಷ ಕೈಗೊಂಡ ಮೊದಲ ಯೋಜನೆಯಾಗಿದೆ.

ಇಸ್ರೋ, ‘#PSLVC49 ಉಪಗ್ರಹ ವಾಹಕವು #E0S01 ಹಾಗೂ 9 ಗ್ರಾಹಕ ಉಪಗ್ರಹಗಳನ್ನು ಹೊತ್ತು ಸಾಗಿತು’ ಎಂದು ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು