ಗುರುವಾರ , ಜೂನ್ 17, 2021
21 °C
ತಮಿಳುನಾಡಿನ ವಿವಿಧೆಡೆ ನ. 27ರಂದು ಐಟಿ ದಾಳಿ

ತಮಿಳುನಾಡು: ಬಹಿರಂಗಪಡಿಸದ ₹450 ಕೋಟಿ ಆದಾಯ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ನ. 27ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ, ಬಹಿರಂಗಪಡಿಸದ ₹450 ಕೋಟಿ ಆದಾಯವನ್ನು ಪತ್ತೆ ಹಚ್ಚಿದ್ದಾರೆ.

ಐಟಿ ವಿಶೇಷ ಆರ್ಥಿಕ ವಲಯ (ಐಟಿ– ಎಸ್‌ಇಜೆಡ್) ಅಭಿವೃದ್ಧಿಪಡಿಸುವ ಉದ್ಯಮಿ, ಕಂಪನಿಯ ಮಾಜಿ ನಿರ್ದೇಶಕ ಹಾಗೂ ಸ್ಟೇನ್‌ಲೆಸ್‌ ಸ್ಟೀಲ್‌ ಪೂರೈಕೆದಾರರೊಬ್ಬರಿಗೆ ಸೇರಿದ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದರು. 

ಚೆನ್ನೈ, ಮುಂಬೈ, ಹೈದರಾಬಾದ್‌ ಹಾಗೂ ಕಡಲೂರಿನಲ್ಲಿರುವ ಈ ಎರಡು ಕಂಪನಿಗಳಿಗೆ ಸೇರಿದ 16 ಸ್ಥಳಗಳ ಮೇಲೆ ದಾಳಿ ನಡೆದಿತ್ತು.

‘ಐಟಿ–ಎಸ್‌ಇಜೆಡ್‌ನ ಮಾಜಿ ನಿರ್ದೇಶಕರಿಗೆ ಸೇರಿದ ಸ್ಥಳಗಳಲ್ಲಿ ನಡೆದ ದಾಳಿ ವೇಳೆ, ಮಾಜಿ ನಿರ್ದೇಶಕ ಹಾಗೂ ಆತನ ಕುಟುಂಬದ ಸದಸ್ಯರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ₹ 100 ಕೋಟಿ ಆದಾಯ ಸಂಗ್ರಹಿಸಿದ್ದರ ಬಗ್ಗೆ ಸಾಕ್ಷ್ಯಗಳನ್ನು ಪತ್ತೆ ಹಚ್ಚಲಾಗಿದೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.

‘ಪ್ರಾಜೆಕ್ಟ್‌ವೊಂದರಡಿ ನಡೆಯುತ್ತಿರುವ ನಿರ್ಮಾಣ ಕಾರ್ಯದ ಹೆಸರಿನಲ್ಲಿ ₹ 160 ಕೋಟಿ ವೆಚ್ಚವಾಗಿರುವುದಾಗಿ ಐಟಿ–ಎಸ್‌ಇಜೆಡ್‌ ಅಭಿವೃದ್ಧಿಪಡಿಸುವ ಉದ್ಯಮಿ ಹೇಳಿಕೊಂಡಿದ್ದನ್ನು ಸಹ ಪತ್ತೆ ಹಚ್ಚಲಾಗಿದೆ’ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಸ್ಟೇನ್‌ ಲೆಸ್‌ ಸ್ಟೀಲ್‌ ಪೂರೈಕೆ ಉದ್ಯಮಿಗೆ ಸೇರಿದ, ಚೆನ್ನೈನಲ್ಲಿರುವ ಸ್ಥಳಗಳಲ್ಲಿ ದಾಳಿ ನಡೆಸಿದ ವೇಳೆ, ಲೆಕ್ಕಕ್ಕೆ ಸಿಗದ ಆದಾಯವನ್ನು ಪತ್ತೆ ಹಚ್ಚಲಾಗಿದೆ. ಈ ಮೊತ್ತ ₹ 100 ಕೋಟಿಯಷ್ಟಾಗಲಿದೆ’ ಎಂದೂ ಸಿಬಿಡಿಟಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು