ಶನಿವಾರ, ಏಪ್ರಿಲ್ 1, 2023
23 °C

ಮೋದಿಯಿಂದ ಅದಾನಿ ರಕ್ಷಣೆ: ರಾಹುಲ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಅದಾನಿ ಸಮೂಹದ ವಿರುದ್ಧ ಗಂಭೀರ ಆರೋಪ ಕೇಳಿಬಂದರೂ ಪ್ರಧಾನಿ ಮೋದಿ ಅವರು ತನಿಖೆಗೆ ಆದೇಶಿಸಿಲ್ಲ. ಅವರು ಅದಾನಿಯನ್ನು ರಕ್ಷಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೂರಿದ್ದಾರೆ.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅದಾನಿ ಸಮೂಹದ ವಿರುದ್ಧ ತನಿಖೆ ಕೈಗೊಳ್ಳುವ ವಿಚಾರವನ್ನು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲೇ ಇಲ್ಲ. ಅವರು ಅದಾನಿಯನ್ನು ರಕ್ಷಿಸುತ್ತಿರುವುದು ಸ್ಪಷ್ಟ. ಅದು ನನಗೂ ಅರ್ಥವಾಗುತ್ತದೆ. ಅದಕ್ಕೆ ಕಾರಣಗಳೂ ಇವೆ’ ಎಂದಿದ್ದಾರೆ. 

‘ಪ್ರಧಾನಿಯವರು ಆಘಾತಕ್ಕೊಳಗಾದಂತಿದೆ. ನಾನು ಕ್ಲಿಷ್ಟಕರ ಪ್ರಶ್ನೆಗಳನ್ನೇನೂ ಅವರ ಮುಂದೆ ಇಟ್ಟಿರಲಿಲ್ಲ. ಅದಾನಿ ಎಷ್ಟು ಬಾರಿ ನಿಮ್ಮ ಜೊತೆ ಪ್ರಯಾಣ ಬೆಳೆಸಿದ್ದರು, ಎಷ್ಟು ಬಾರಿ ನಿಮ್ಮನ್ನು ಭೇಟಿಯಾಗಿದ್ದರು ಎಂಬುದನ್ನಷ್ಟೇ ಕೇಳಿದ್ದೆ. ಅದಕ್ಕೂ ಅವರಿಂದ ಉತ್ತರ ದೊರೆತಿಲ್ಲ’ ಎಂದೂ ಹೇಳಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು