ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನಾ ಕೃತ್ಯಕ್ಕೆ ಸಂಚು: ಎಂಟು ಉಗ್ರರ ಸೆರೆ

Last Updated 16 ಮೇ 2022, 13:50 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು–ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಸೋಮವಾರ ಉಗ್ರರ ಸಂಚನ್ನು ವಿಫಲಗೊಳಿಸಿರುವ ಭದ್ರತಾ ಪಡೆಗಳು, ಈ ಸಂಬಂಧ ಲಷ್ಕರ್‌–ಎ–ತೈಯಬ (ಎಲ್‌ಇಟಿ) ಸಂಘಟನೆಯ ಎಂಟು ಉಗ್ರರನ್ನು ಬಂಧಿಸಿವೆ.

ಪಾಕಿಸ್ತಾನಿ ತರಬೇತಿ ಪಡೆದ ಉಗ್ರ ಆರಿಫ್‌ ಅಜಾಜ್‌ ಸೆಹ್ರಿ ಅಲಿಯಾಸ್‌ ಅನ್ಫಾಲ್‌, ಹೈಬ್ರಿಡ್‌ ಉಗ್ರರಾದ ಅಜಾಜ್‌ ಅಹ್ಮದ್‌ ರೇಶಿ, ಶಾರಿಕ್‌ ಅಹ್ಮದ್‌ ಲೋನ್‌ ಹಾಗೂ ಸಹಚರರಾದ ರಿಯಾಜ್‌ ಅಹ್ಮದ್‌ ಮಿರ್‌, ಗುಲಾಂ ಮೊಹಮ್ಮದ್‌ ವಾಜಾ, ಮಕ್ಸೂದ್ ಅಹ್ಮದ್ ಮಲಿಕ್ ಮತ್ತು ಶೀಮಾ ಶಫಿ ಬಂಧಿತರು.

‘ಬಂಡಿಪೋರಾದಲ್ಲಿನ ಇತ್ತೀಚಿನ ಎನ್‌ಕೌಂಟರ್‌ಗಳ ಕುರಿತು ಪೊಲೀಸರು ಹಾಗೂ ಭದ್ರತಾ ಪಡೆಗಳು ತನಿಖೆ ನಡೆಸುತ್ತಿದ್ದ ವೇಳೆ ಪಾಕಿಸ್ತಾನಿ ತರಬೇತಿ ಭಯೋತ್ಪಾದಕ, ಇಬ್ಬರು ಹೈಬ್ರಿಡ್‌ ಉಗ್ರರು ಹಾಗೂ ಮಹಿಳೆ ಸೇರಿ ನಾಲ್ವರು ಉಗ್ರರ ಸಹಚರರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ವಕ್ತಾರರು ತಿಳಿಸಿದರು.

‘ಬಂಧಿತ ಭಯೋತ್ಪಾದಕರು ಬಂಡಿಪೋರಾ ಜಿಲ್ಲೆಯಲ್ಲಿ ಪೊಲೀಸ್, ಭದ್ರತಾ ಪಡೆಗಳು ಹಾಗೂ ಸೇನೆ ನೆಲೆಗಳ ಮೇಲೆ ದಾಳಿ ನಡೆಸಲು ನಿಯೋಜನೆಗೊಂಡಿದ್ದರು. ಬಂಧಿತರಿಂದ ಎರಡು ಪಿಸ್ತೂಲ್‌, ಮೂರು ಪಿಸ್ತೂಲ್ ಮ್ಯಾಗಜೀನ್‌, 25 ಪಿಸ್ತೂಲ್ ಗುಂಡು, ಮೂರು ಹ್ಯಾಂಡ್ ಗ್ರೆನೇಡ್‌, ಒಂದು ವ್ಯಾನ್‌, ಮೂರು ಸ್ಕೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT