ಗುರುವಾರ , ಅಕ್ಟೋಬರ್ 1, 2020
20 °C

ರಾಮಮಂದಿರಕ್ಕೆ ಹಿಂದೂ, ಮುಸಲ್ಮಾನ ಕುಶಲಕರ್ಮಿಗಳಿಂದ 2,100 ಕೆ.ಜಿ ಹಿತ್ತಾಳೆ ಗಂಟೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಲೇಸರ್‌ (ಉತ್ತರಪ್ರದೇಶ): ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕಾಗಿ 2,100 ಕೆ.ಜಿ ತೂಕದ ಹಿತ್ತಾಳೆ ಗಂಟೆಯನ್ನು ಇಲ್ಲಿನ ಜಲೇಸರ್ ಪಟ್ಟಣದಲ್ಲಿ ಸಿದ್ಧಗೊಳಿಸಲಾಗುತ್ತಿದೆ. ಹಿಂದೂ ಮತ್ತು ಮುಸಲ್ಮಾನ ಕುಶಲಕರ್ಮಿಗಳು ಒಟ್ಟುಗೂಡಿ ಇದನ್ನು ಸಿದ್ಧಪಡಿಸುತ್ತಿರುವುದು ವಿಶೇಷ.

‘ಈ ಗಂಟೆಯು ಕೇವಲ ಹಿತ್ತಾಳೆ ಮಾತ್ರವಲ್ಲದೇ ಅಷ್ಟಧಾತುಗಳನ್ನು ಒಳಗೊಂಡಿದೆ. ಇದು ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸದಿಂದ ತಯಾರಿಸಲ್ಪಟ್ಟಿದೆ. ಇದು ಭಾರತದ ಅತಿ ದೊಡ್ಡ ಗಾತ್ರದ ಗಂಟೆಯಾಗಿದೆ’ ಎಂದು ವರ್ಕ್ ಶಾಪ್ಮಾ ಲೀಕ ವಿಕಾಸ್‌ ಮಿಥಲ್‌ ಅವರು ಹೇಳಿದರು.

ಕುಶಲಕರ್ಮಿ ದೌ ದಯಾಳ್ ನೇತೃತ್ವದ ತಂಡ ಗಂಟೆಯನ್ನು ಸಿದ್ದಗೊಳಿಸಿದ್ದು, ಕುಶಲಕರ್ಮಿ ಇಕ್ಬಾಲ್‌ ಮಿಸ್ತ್ರಿ ಅವರು ವಿನ್ಯಾಸ ಮಾಡಿದ್ದಾರೆ.

‘ಪ್ರಥಮ ಬಾರಿಗೆ ದೊಡ್ಡ ಗಾತ್ರದ ಗಂಟೆಯನ್ನು ತಯಾರಿಸುತ್ತಿದ್ದೇವೆ. ಇದಕ್ಕೆ ಬಹಳ ತಿಂಗಳಿನ ಸಿದ್ಧತೆ ಅಗತ್ಯ. ರಾಮಮಂದಿರಕ್ಕಾಗಿ ಇದನ್ನು ತಯಾರಿಸುತ್ತಿದ್ದೇವೆ ಎಂಬ ಅಂಶ ನಮಗೆ ಇನ್ನಷ್ಟು ಉತ್ಸಾಹ ನೀಡುತ್ತಿದೆ. ಯಾವುದೇ ಲೋಪ ಾಗದಂತೆ ಎಚ್ಚರವಹಿಸುತ್ತಿದ್ದೇವೆ ಎಂದು ದೌ ದಯಾಳ್ ಅವರು ಹೇಳಿದರು.

ವಿಕಾಸ್‌ ಮಿಥಲ್ ಅವರಿಗೆ 2,100 ತೂಕದ ಗಂಟೆ ಸಿದ್ಧಗೊಳಿಸುವಂತೆ ನಿರ್ಮೋಹಿ ಅಖಾಡವು ಸೂಚಿಸಿತ್ತು. ಗಂಟೆಯ ವೆಚ್ಚ ಸುಮಾರು 21 ಲಕ್ಷ ಆಗಬಹುದು. ನಾವು ಇದನ್ನು ಮಂದಿರಕ್ಕೆ ಕೊಡುಗೆ ನೀಡಲು ಉದ್ದೇಶಿಸಿದ್ದೇವೆ ಎಂದು ಶಾಪ್ ನ ಆದಿತ್ಯ ಮಿಠ್ಟಲ್ ಹೇಳಿದರು.

ಇದಕ್ಕೂ ಮುನ್ನ ದಯಾಳ್ ಅವರು 101 ಕೆ.ಜಿ ತೂಕದ ಗಂಟೆಯನ್ನು ಸಿದ್ಧಪಡಿಸಿದ್ದು, ಉತ್ತರಾಖಂಡದ ಕೇದಾರನಾಥ ದೇವಸ್ಥಾನದಲ್ಲಿ ಅದು ಬಳಕೆಯಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು