ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಜೈಷ್ ಉಗ್ರರು, ನಾಲ್ವರು ಉಗ್ರ ಸಹಚರರ ಬಂಧನ

Last Updated 31 ಜನವರಿ 2021, 1:35 IST
ಅಕ್ಷರ ಗಾತ್ರ

ಶ್ರೀನಗರ: ಹೊಸದಾಗಿ ನೇಮಕಗೊಂಡ ಇಬ್ಬರು ಭಯೋತ್ಪಾದಕರು ಮತ್ತು ಜೈಷ್-ಎ-ಮೊಹಮ್ಮದ್ (ಜೆಎಂ) ಹಾಗೂ ಲಷ್ಕರ್-ಎ-ಮುಸ್ತಾಫಾ (ಎಲ್‌ಇಎಂ) ಉಗ್ರ ಸಂಘಟನೆಗೆ ಸೇರಿದನಾಲ್ವರು ಉಗ್ರ ಸಹಚರರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.

ಅನಂತನಾಗ್ ಮತ್ತು ಬಿಜ್‌ಬೆಹರಾ ಪಟ್ಟಣಗಳಲ್ಲಿ ಭಯೋತ್ಪಾದಕ ದಾಳಿಯ ಬಗ್ಗೆ ಖಚಿತ ಮಾಹಿತಿ ಲಭಿಸಿದ ಬಳಿಕ ವಿವಿಧ ಸ್ಥಳಗಳಲ್ಲಿ ಪೊಲೀಸರು ತಪಾಸಣೆಯನ್ನು ತೀವ್ರಗೊಳಿಸಿದ್ದರು. ಈ ಸಂದರ್ಭದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರನ್ನು ಸೆರೆ ಹಿಡಿಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.

ಬಿಜ್‌ಬೆಹೆರಾದ ಡೊನಿಪುರದ ಒಂದು ಚೆಕ್ ಪೋಸ್ಟ್‌ನಲ್ಲಿ ಕಾರಿನಲ್ಲಿದ್ದ ಇಬ್ಬರು ಉಗ್ರರು ಪಲಾಯನಗೈಯಲು ಯತ್ನಿಸಿದರು. ಆದರೆ ಪೊಲೀಸರು ಬಹಳ ಚಾತುರ್ಯದಿಂದ ಬಂಧಿಸಲು ಯಶಸ್ವಿಯಾದರು.

ಅವರನ್ನು ಇಮ್ರಾನ್ ಅಹ್ಮದ್ ಹಜಂ ಹಾಗೂ ಇರ್ಫಾನ್ ಅಹ್ಮದ್ ಅಹೆಂಗರ್ ಎಂದು ಗುರುತಿಸಿದ್ದು, ಇವರಿಬ್ಬರು ಇತ್ತೀಚೆಗಷ್ಟೇ ನಿಷೇಧಿತ ಎಲ್‌ಇಎಂ/ಜೆಇಎಂ ಭಯೋತ್ಪಾದಕ ಸಂಘಟನೆಗೆ ಸೇರಿದ್ದರು.

ಉಗ್ರರಿಂದ ಎರಡು ಪಿಸ್ತೂಲ್ ಸೇರಿದಂತೆ ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ. ಇವರು ಭದ್ರತಾ ಪಡೆಯನ್ನು ಗುರಿಯಾಗಿಸಿ ಐಇಡಿ ಸ್ಫೋಟ ನಡೆಸಲು ಸಂಚು ಹೂಡಿದ್ದರು ಎಂಬುದು ತನಿಖೆ ವೇಳೆಯಲ್ಲಿ ತಿಳಿದು ಬಂದಿದೆ.

ತನಿಖೆ ಸಮಯದಲ್ಲಿ ಜೆಎಂನ ನಾಲ್ಕು ಭಯೋತ್ಪಾದಕ ಸಹಚರರನ್ನು ಬಂಧಿಸಲಾಗಿದೆ. ಅವರನ್ನು ಬಿಲಾಲ್ ಅಹ್ಮದ್ ಕುಮಾರ್, ತವ್ಫೀಕ್ ಅಹ್ಮದ್ ಲಾವೆ, ಮುಜಾಮಿಲ್ ಅಹ್ಮದ್ ವಾನಿ ಮತ್ತು ಆದಿಲ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ. ಅಪರಾಧಿಗಳಿಂದ ಎರಡು ಗ್ರೆನೇಡ್, 30 ಎಕೆ-47 ಮದ್ದುಗುಂಡುಗಳು ಮತ್ತು ಒಂದು ಕೆ.ಜಿ ಸ್ಫೋಟಕ ವಸ್ತುಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT