ಮಂಗಳವಾರ, ಆಗಸ್ಟ್ 9, 2022
23 °C
ರಾಜಕೀಯಕ್ಕೆ ಸೇರುವ ಉದ್ದೇಶ

ಜಮ್ಮು–ಕಾಶ್ಮೀರ ಐಪಿಎಸ್‌ ಅಧಿಕಾರಿ ಬಸಂತ್‌ ಕುಮಾರ್‌ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು–ಕಾಶ್ಮೀರ ಕೇಡರ್‌ ಹಿರಿಯ ಐಪಿಎಸ್‌ ಅಧಿಕಾರಿ ಬಸಂತ್‌ ಕುಮಾರ್ ರಥ್ ಅವರು ರಾಜಕೀಯಕ್ಕೆ ಸೇರ್ಪಡೆಯಾಗುವ ಉದ್ದೇಶದಿಂದ ಭಾನುವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

ಈ ಸಂಬಂಧ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘ಚುನಾವಣಾ ರಾಜಕೀಯಕ್ಕೆ ಸೇರಲು ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಲು ಬಯಸಿದ್ದೇನೆ’ ಎಂದು ಹೇಳಿದ್ದಾರೆ.
 
ಇದಕ್ಕೂ ಮೊದಲು ,‘ನಾನು ರಾಜಕೀಯ ಪಕ್ಷಕ್ಕೆ ಸೇರುವುದಾದರೆ ಅದು ಬಿಜೆಪಿಗೆ ಮಾತ್ರ. ಚುನಾವಣೆಗೆ ಸ್ಪರ್ಧಿಸುವುದಾದರೆ  ಅದು ಕಾಶ್ಮೀರದಿಂದ ಮಾತ್ರ. ರಾಜಕೀಯಕ್ಕೆ ಸೇರುವುದಾದರೆ ಮಾರ್ಚ್‌ 6, 2024ರ ಒಳಗಾಗಿ ಸೇರ್ಪಡೆಯಾಗುತ್ತೇನೆ’ ಎಂದು ಅವರು ಟ್ವೀಟ್‌ ಮಾಡಿದ್ದರು.

ಪೊಲೀಸ್‌ ಮಹಾ ನಿರ್ದೇಶಕ ಶ್ರೇಣಿಯನ್ನು ಹೊಂದಿದ್ದ ಬಸಂತ್‌ ಕುಮಾರ್‌ ಇತ್ತೀಚೆಗೆ ಹಲವು ವಿವಾದಗಳಿಂದ ಸುದ್ದಿಯಲ್ಲಿದ್ದರು. ದುರ್ನಡತೆ ಮತ್ತು ದುರ್ವರ್ತನೆ ಆರೋಪ ಸಂಬಂಧ ಎರಡು ವರ್ಷಗಳ ಹಿಂದೆ ಅವರನ್ನು ಅಮಾನತು ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು