ಕಾಶ್ಮೀರಿ ಪಂಡಿತ ನೌಕರನ ಹತ್ಯೆ: ತನಿಖೆಗೆ ಎಸ್ಐಟಿ ರಚಿಸಲು ಸರ್ಕಾರದ ನಿರ್ಧಾರ

ಶ್ರೀನಗರ: ಕಾಶ್ಮೀರಿ ಪಂಡಿತ ನೌಕರನ ರಾಹುಲ್ ಭಟ್ ಹತ್ಯೆಗೆ ಸಂಬಂಧಿಸಿದ ತನಿಖೆಗಾಗಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುತ್ತಿರುವುದಾಗಿ ಶುಕ್ರವಾರ ಪ್ರಕಟಿಸಿದೆ.
ಈ ಕುರಿತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಕಚೇರಿಯ ಖಾತೆಯು ಟ್ವೀಟಿಸಿದೆ. ಉಗ್ರರ ನೀಚ ಕೃತ್ಯದ ಕುರಿತು ಎಲ್ಲ ಆಯಾಮಗಳಲ್ಲಿಯೂ ತನಿಖೆ ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ರೂಪಿಸಲು ನಿರ್ಧರಿಸಿರುವುದಾಗಿ ಹಂಚಿಕೊಳ್ಳಲಾಗಿದೆ.
'ರಾಹುಲ್ ಭಟ್ ಅವರ ಹೆಂಡತಿಗೆ ಜಮ್ಮುವಿನಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಹಾಗೂ ಕುಟಂಬಕ್ಕೆ ಹಣಕಾಸು ಸಹಕಾರ ಒದಗಿಸಲಾಗುತ್ತದೆ. ಸರ್ಕಾರವು ಅವರ ಮಗಳ ಶಿಕ್ಷಣದ ವೆಚ್ಚವನ್ನು ಭರಿಸಲಿದೆ' ಎಂದು ಟ್ವೀಟಿಸಲಾಗಿದೆ.
J&K administration to provide a government job to Rahul Bhat's wife in Jammu and financial assistance to the family. The government will bear educational expenses of the daughter.
— Office of LG J&K (@OfficeOfLGJandK) May 13, 2022
ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್ ಕಚೇರಿಯಲ್ಲಿ ಗುರುವಾರ ಉಗ್ರನೊಬ್ಬ ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರ ರಾಹುಲ್ ಭಟ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನು. ಅವರು ತಹಶೀಲ್ ಕಚೇರಿಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೊಠಡಿಯನ್ನುಏಕಾಏಕಿ ಪ್ರವೇಶಿಸಿದ ಉಗ್ರ ಗುಂಡು ಹಾರಿಸಿದ್ದನು.
ಇದನ್ನೂ ಓದಿ: ಜಮ್ಮು ಸಮೀಪ ಯಾತ್ರಾರ್ಥಿಗಳಿದ್ದ ಬಸ್ಗೆ ಬೆಂಕಿ; 4 ಮಂದಿ ಸಾವು, 20 ಜನರಿಗೆ ಗಾಯ
ಇತ್ತೀಚೆಗೆ ಕಾಶ್ಮೀರವನ್ನು ನುಸುಳಿದ್ದ ಪಾಕಿಸ್ತಾನ ಮೂಲದ ಇಬ್ಬರು ಲಷ್ಕರ್–ಎ–ತೈಯಬ(ಎಲ್ಇಟಿ) ಸಂಘಟನೆಯ ಇಬ್ಬರು ಉಗ್ರರನ್ನು ಶುಕ್ರವಾರ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.