ಬುಧವಾರ, ಮಾರ್ಚ್ 29, 2023
27 °C

ಸೇನಾ ಶಿಬಿರದ ಬಳಿ ಅನುಮಾನಾಸ್ಪದ ಬ್ಯಾಗ್:‌ ಜಮ್ಮು-ಪೂಂಚ್‌ ಹೆದ್ದಾರಿ ಬಂದ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಶ್ರೀನಗರ: ಭಿಂಬರ್‌ ಗಾಲಿ ಪ್ರದೇಶದಲ್ಲಿರುವ ಸೇನಾ ಶಿಬಿರದ ಸಮೀಪದಲ್ಲೇ ಅನುಮಾನಾಸ್ಪದ ಬ್ಯಾಗ್‌ವೊಂದು ಪತ್ತೆಯಾಗಿದ್ದು, ಜಮ್ಮು ಮತ್ತು ಪೂಂಚ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮಾತ್ರವಲ್ಲದೆ ಈ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸೇನೆಯು ಬ್ಯಾಗ್‌ ಅನ್ನು ತಪಾಸಣೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಮತ್ತು ಜಮ್ಮುವಿನ ವಿವಿಧ ಪ್ರದೇಶಗಳಲ್ಲಿ ನಾಲ್ಕು ಡ್ರೋನ್‌ಗಳು ಕಾಣಿಸಿಕೊಂಡಿದ್ದವು. ಅದಾದ ಕೆಲಹೊತ್ತಿನಲ್ಲೇ ಈ ಬ್ಯಾಗ್‌ ಕಾಣಿಸಿಕೊಂಡಿದೆ. ಜಮ್ಮುವಿನಲ್ಲಿರುವ ವಾಯು ಸೇನಾ ಕೇಂದ್ರದ ಮೇಲೆ ದಾಳಿ ನಡೆಸಲು ಉಗ್ರರು ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಕಳೆದ ತಿಂಗಳು ಬಳಸಿದ್ದರು.

ಈ ನಿಟ್ಟಿನಲ್ಲಿ ಶ್ರೀನಗರ, ಕುಪ್ವಾರಾ, ರಾಜೌರಿ ಮತ್ತು ಬಾರಾಮುಲ್ಲಾದಲ್ಲಿ ಡ್ರೋನ್‌ ಹಾಗೂ ಅದೇ ಮಾದರಿಯ ವೈಮಾನಿಕ ಉಪಕರಣಗಳ ಸಂಗ್ರಹ, ಬಳಕೆ, ಮಾರಾಟ ಮತ್ತು ಸರಬರಾಜಿಗೆ ನಿರ್ಬಂಧ ಹೇರಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು