ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌, ಮೇ ತಿಂಗಳಲ್ಲಿ ಜೆಇಇ ಮೇನ್‌ ಪರೀಕ್ಷೆ

Last Updated 1 ಮಾರ್ಚ್ 2022, 22:39 IST
ಅಕ್ಷರ ಗಾತ್ರ

ನವದೆಹಲಿ: ಜೆಇಇ ಮೇನ್‌ ಪರೀಕ್ಷೆಯ ಮೊದಲ ಹಂತದ ಪರೀಕ್ಷೆಗಳು ಏಪ್ರಿಲ್‌ 16ರಿಂದ 21ರವರೆಗೆ ಮತ್ತು ಎರಡನೇ ಹಂತದ ಪರೀಕ್ಷೆಗಳು ಮೇ 24 ರಿಂದ 29ರವರೆಗೂ ನಡೆಯಲಿವೆ.

ಜೆಇಇ ಮೇನ್‌ ಪರೀಕ್ಷೆಯು ಎರಡು ಭಾಗವನ್ನು ಒಳಗೊಂಡಿರುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ ಪ್ರಕಟಿಸಿದೆ.ಇದು, ಐಐಟಿಗಳಿಗೆ ಪ್ರವೇಶ ಕಲ್ಪಿಸಲು ನಡೆಸಲಿರುವ ಜೆಇಇ–ಅಡ್ವಾನ್ಸಡ್‌ ಪರೀಕ್ಷೆಗೆ ಅರ್ಹತಾ ಪರೀಕ್ಷೆಯೂ ಆಗಿರಲಿದೆ.

ಮೊದಲನೇ ಭಾಗವು ಎನ್‌ಐಟಿ, ಐಐಐಟಿಗಳಲ್ಲಿ ಬಿಇ., ಬಿ.ಟೆಕ್ ಪದವಿ ಕೋರ್ಸ್‌ಗಗಳಿಗೆ ಪ್ರವೇಶ ಪರೀಕ್ಷೆ
ಯಾಗಿದ್ದರೆ, ಎರಡನೇ ಭಾಗವು ಆರ್ಕಿಟೆಕ್ಟಿಕ್‌ ಮತ್ತು ಪ್ಲಾನಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆಯಾಗಿರಲಿದೆ.

ಬೆಂಗಳೂರು ವರದಿ: ಜೆಇಇ ಮೇನ್‌ ಪರೀಕ್ಷೆ ನಡೆಯುವ ಸಂದರ್ಭದಲ್ಲೇ ದ್ವಿತೀಯ ಪಿ.ಯು ಪರೀಕ್ಷೆಗಳನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ 16ರಂದು ಗಣಿತ, 20ರಂದು ಭೌತವಿಜ್ಞಾನ, 21ರಂದು ಫ್ರೆಂಚ್ ಭಾಷಾ ಪರೀಕ್ಷೆಗಳು ನಡೆಯಲಿವೆ. ಅದೇ ದಿನ ಜೆಇ ಪರೀಕ್ಷೆಗಳೂ ನಡೆಯುವುದರಿಂದ ಕರ್ನಾಟಕದ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT