ಗುರುವಾರ , ಮಾರ್ಚ್ 23, 2023
28 °C

ಜಾರ್ಖಂಡ್‌: ವಿಡಿಯೊ ಕರೆ ಸಹಾಯದಿಂದ 13 ವರ್ಷಗಳ ಬಳಿಕ ಕುಟುಂಬದ ಸೇರಿದ ಯುವಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡುಮ್ಕಾ: ಆತ ಐದು ವರ್ಷದ ಬಾಲಕನಾಗಿದ್ದಾಗ ಮನೆಯಿಂದ ದೂರವಾಗಿದ್ದ. 13 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈಗ ಮನೆ ಸೇರಿದ್ದಾನೆ.

ದೀಪಕ್‌ ದೆಹ್ರಿ(18) 5 ವರ್ಷದ ಬಾಲಕನಾಗಿದ್ದಾಗ ತನ್ನ ಕುಟುಂದವರಿಂದ ಬೇರ್ಪಟ್ಟಿದ್ದ. ಆದರೆ ವಿಡಿಯೊ ಕರೆಯ ಸಹಾಯದಿಂದ ತನ್ನ ಗ್ರಾಮವನ್ನು ದೀಪ್‌ ಪತ್ತೆ ಮಾಡಿದ್ದಾನೆ.

‘ಜಾರ್ಖಂಡ್‌ದ ಪಹರಿಯಾ ಪ್ರಾಚೀನ ಬುಡಕಟ್ಟು ಸಮುದಾಯಕ್ಕೆ ಸೇರಿದ ದೀಪಕ್‌, ಐದು ವರ್ಷದ ಬಾಲಕನಾಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡಿದ್ದ. ಈ ಬಳಿಕ ತಾಯಿಯೂ ಅವನನ್ನು ತ್ಯಜಿಸಿದ್ದರು. ಆಗ ದೀಪಕ್‌ನ ಚಿಕ್ಕಮ್ಮ ಆತನನ್ನು ಉತ್ತರ ಪ್ರದೇಶದ ಹರ್ದೊರಿಗೆ ಕರೆದುಕೊಂಡಿದ್ದರು. ಆ ವೇಳೆ ದೀಪಕ್‌ ಮನೆಗೆ ಹೋಗಲೆಂದು ಚಿಕ್ಕಮ್ಮನ ಕೈತಪ್ಪಿಸಿ ಓಡಿಹೋಗಿದ್ದ. ಆದರೆ, ಜಾರ್ಖಂಡ್‌ ಬದಲು ಆತ ರಾಜಸ್ಥಾನದ ಬಿಕನೇರ್‌ಗೆ ಹೋಗುವ ರೈಲಿಗೆ ಹತ್ತಿದ್ದ’ ಎಂದು ಮಸಂಜೂರು ಪೊಲೀಸ್‌ ಠಾಣೆಯ ಅಧಿಕಾರಿ ಚಂದ್ರಶೇಖರ್‌ ದುಬೆ ತಿಳಿಸಿದರು.

ಬಿಕಾನೇರ್‌ನ ಸಮಾಜ ಕಲ್ಯಾಣ ಇಲಾಖೆಯ ಬಾಲಮಂದಿರದಲ್ಲಿ ದೀಪಕ್‌ 13 ವರ್ಷಗಳನ್ನು ಕಳೆದಿದ್ದಾನೆ. ದೀಪಕ್‌ ಹಲವು ಬಾರಿ ಭಾವೋದ್ವೇಗಕ್ಕಾಗಿ ಒಳಗಾಗಿ ತನ್ನ ಬಾಲ್ಯದ ನೆನಪುಗಳನ್ನು ಹೇಳುತ್ತಿದ್ದ. ಜತೆಗೆ, ಗ್ರಾಮದ ವಿವರಗಳನ್ನು ನೀಡುತ್ತಿದ್ದ. ಈ ವಿವರಗಳ ಆಧಾರದ ಮೇಲೆ ಬಾಲಮಂದಿರದ ಅಧೀಕ್ಷಕ ಅರವಿಂದ್‌ ಆಚಾರ್ಯ ಅವರು, ಮಸಂಜೂರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಬಳಿಕ ವಿಡಿಯೊ ಕರೆಯ ಮೂಲಕ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳನ್ನು ದೀಪಕ್‌ಗೆ ತೋರಿಸಿದ್ದಾರೆ. ಈ ವೇಳೆ ತನ್ನ ಮನೆ ಬಳಿಯಿದ್ದ ಮಸ್ಸಾಂಜೊರ್‌ ಅಣೆಕಟ್ಟನ್ನು ದೀಪಕ್‌ ಗುರುತಿಸಿದ್ದಾನೆ.

ಬಳಿಕ ದೀಪಕ್‌ನನ್ನು ಪೊಲೀಸ್‌ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬಿಕಾನೇರ್ ಪೊಲೀಸರು ದೀಪಕ್‌ನನ್ನು ಶುಕ್ರವಾರ ಆತನ ಕುಟುಂಬದವರಿಗೆ ಒಪ್ಪಿಸಿದರು.

‘ನನಗೆ ಅಪಾರ ಸಂತಸವಾಗಿದೆ. ನನ್ನ ಜನರ ನಡುವೆ ಬದುಕು ಸಾಗಿಸುತ್ತೇನೆ’ ಎಂದು ದೀಪಕ್‌ ಉತ್ಸಾಹದಿಂದ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು