ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರ: ಡಿಡಿಸಿ ಮೊದಲ ಹಂತದ ಚುನಾವಣೆ ಪ್ರಕ್ರಿಯೆ ಆರಂಭ

Last Updated 28 ನವೆಂಬರ್ 2020, 6:30 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಮೊದಲ ಹಂತದ ಚುನಾವಣೆ ಶನಿವಾರ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪೀಪಲ್ಸ್ ಅಲೈಯನ್ಸ್ ಫಾರ್‌ಗುಪ್ಕರ್ ಡಿಕ್ಲರೇಷನ್‌ (ಪಿಎಜಿಡಿ), ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ), ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷಗಳ (ಪಿಡಿಪಿ) ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಮತ್ತು ಮಾಜಿ ಹಣಕಾಸು ಸಚಿವ ಅಲ್ತಾಫ್‌ ಬುಖಾರಿ ಅವರ ಅಪ್ನಿ ಪಾರ್ಟಿ ಕೂಡ ಕಣದಲ್ಲಿದೆ.

ಡಿಡಿಸಿ, ‍ಪಂಚಾಯತ್‌ ಉಪಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಎಂಟು ಹಂತಗಳಲ್ಲಿ ನಡೆಯಲಿವೆ. ಶನಿವಾರ ಬೆಳಿಗ್ಗೆ 7 ಗಂಟೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೊದಲ ಹಂತದ ಚುನಾವಣೆಯಲ್ಲಿ 1,475 ಅಭ್ಯರ್ಥಿಗಳು ಕಣದಲ್ಲಿದ್ದಾರೆ‌. ಜಮ್ಮುವಿನ 18 ಮತ್ತು ಕಾಶ್ಮೀರದ 25 ಸ್ಥಾನಗಳು ಸೇರಿದಂತೆ ಡಿಡಿಸಿಯ ಒಟ್ಟು 43 ಕ್ಷೇತ್ರಗಳಿಗಾಗಿ ಇಂದು ಮತದಾನ ನಡೆಯುತ್ತಿದೆ.

ಪಂಚಾಯತ್‌ಗಳ ಉಪಚುನಾವಣೆಯಲ್ಲಿ 899 ಅಭ್ಯರ್ಥಿಗಳು ‘ಪಂಚ್‌’ ಸ್ಥಾನಗಳಿಗಾಗಿ ಮತ್ತು 280 ಮಂದಿ ‘ಸರ್ಪಂಚ್’ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. ಮೊದಲ ಹಂತದ ಚುನಾವಣೆಗಾಗಿ 2,644 ಮತಗಟ್ಟೆಗಳಲ್ಲಿ ನಡೆಯಲಿದ್ದು, ಅಗತ್ಯ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶ್ರೀನಗರ ಮುನ್ಸಿಪಲ್‌ ಕಾರ್ಪೊರೇಷನ್‌ ನಾಲ್ಕು ವಾರ್ಡ್‌ಗಳು ಮತ್ತು ಪಹಲ್ಗಮ್ ಮತ್ತು ಐಶ್ಮುಕಾಮ್‌ನ ಪುರಸಭೆಯ ಕೆಲ ವಾರ್ಡ್‌ಗಳ ಉಪ ಚುನಾವಣೆಯೂ ಇದೇ ವೇಳೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT