ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ಆಹಾರದ ಆಯ್ಕೆ ಹೇರಿಲ್ಲ: ಕುಲಪತಿ

Last Updated 13 ಏಪ್ರಿಲ್ 2022, 18:34 IST
ಅಕ್ಷರ ಗಾತ್ರ

ನವದೆಹಲಿ: ‘ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು (ಜೆಎನ್‌ಯು) ವಿದ್ಯಾರ್ಥಿಗಳ ಮೇಲೆ ಆಹಾರದ ಆಯ್ಕೆಯನ್ನು ಹೇರುವುದಿಲ್ಲ. ವಿದ್ಯಾರ್ಥಿಗಳು ಚರ್ಚೆ ಮತ್ತು ಚಳವಳಿ ನಡೆಸಬಹುದು. ಆದರೆ, ಹಿಂಸಾಚಾರದಲ್ಲಿ ಪಾಲ್ಗೊಳ್ಳಬಾರದು’ ಎಂದು ವಿವಿ ಕುಲಪತಿ ಶಾಂತಿಶ್ರೀ ಧೂಲಿಪುಡಿ ಪಂಡಿತ್‌ ಬುಧವಾರ ಜೆಎನ್‌ಯು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ರಾಮನವಮಿ ಹಬ್ಬದಂದು ಕೆಲವು ವಿದ್ಯಾರ್ಥಿಗಳು ವಿ.ವಿ ಕ್ಯಾಂಪಸ್‌ನಲ್ಲಿ ಪೂಜೆ ಆಯೋಜಿಸಿದ್ದ ಕಾರಣಕ್ಕೆ ಹಾಸ್ಟೆಲ್ ಮೆಸ್‌ನಲ್ಲಿ ಮಾಂಸಾಹಾರ ಬಡಿಸಬಾರದೆಂದು ಒತ್ತಾಯಿಸಿದ ಸಂಬಂಧ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ಬೆಳವಣಿಗೆಯ ನಂತರ ಕುಲಪತಿ ಈ ಎಚ್ಚರಿಕೆ ನೀಡಿದ್ದಾರೆ.

‘ವಿಶ್ವವಿದ್ಯಾಲಯವು ಯಾವುದೇ ವಿದ್ಯಾರ್ಥಿಯ ಮೇಲೆ ಯಾವುದೇ ಆಹಾರದ ಆಯ್ಕೆಯನ್ನು ಹೇರುವುದಿಲ್ಲ. ಆಹಾರದ ಆಯ್ಕೆ ವೈಯಕ್ತಿಕ ಹಕ್ಕು ಮತ್ತು ಮೂಲಭೂತ ಹಕ್ಕು. ವಿದ್ಯಾರ್ಥಿಗಳುಚರ್ಚೆ, ಆಂದೋಲನ ನಡೆಸಲಿ. ಆದರೆ, ಹಿಂಸಾಚಾರದಲ್ಲಿ ಭಾಗಿಯಾಗುವುದನ್ನು ಸಹಿಸಲ್ಲ’ ಎಂದು ಅವರು ಹೇಳಿದರು.

ಪಂಡಿತ್ ಅವರು, ಜೆಎನ್‌ಯು ವಿದ್ಯಾರ್ಥಿ ಸಂಘ ಮತ್ತು ಎಬಿವಿಪಿ ಸದಸ್ಯರನ್ನು ಭೇಟಿಯಾದರು.ವಿಶ್ವವಿದ್ಯಾಲಯದಲ್ಲಿ ತಾವು ವಿದ್ಯಾರ್ಥಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡ ಅವರು, ಆಗ ಯಾವುದೇ ಧಾರ್ಮಿಕ ಹಬ್ಬಗಳಿಗೆ ವಿವಿಯಲ್ಲಿ ಅವಕಾಶವಿರಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT