ಬುಧವಾರ, ಜೂನ್ 23, 2021
30 °C
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ; ತವರುಸ್ಮರಿಸಿದ ಕಮಲಾ

ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಸ್ಪರ್ಧೆ: ಅಧಿಕೃತ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕನ್ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಯಿತು.

ಇಲ್ಲಿ ಆನ್‌ಲೈನ್‌ ಮೂಲಕ ನಡೆದ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಈ ಘೋಷಣೆ ಮಾಡಲಾಯಿತು. ನಂತರ ಮಾತನಾಡಿದ ಕಮಲಾ ಹ್ಯಾರಿಸ್ ಅವರು ‘ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒಪ್ಪಿದ್ದೇನೆ’ ಎಂದು ಪ್ರಕಟಿಸಿದರು.

‘ದೇಶಕ್ಕಾಗಿ  ಹೋರಾಟ ಮಾಡಿದ ಕಪ್ಪು ಮಹಿಳೆಯರನ್ನು ಸ್ಮರಿಸುವ ಜತೆಗೆ, ಇನ್ನು ಮುಂದೆ ನಾವು ದೇಶಕ್ಕಾಗಿ ಪರಸ್ಪರ ಬದ್ಧತೆಯಿಂದ, ವಿಶ್ವಾಸದಿಂದ ಹೋರಾಡೋಣ’ ಎಂದೂ ಹೇಳಿದರು. 

ಇದೇ ವೇಳೆ ತವರಿನ ನೆಲ ತಮಿಳುನಾಡನ್ನು ಬಹಳ ಹೆಮ್ಮೆಯಿಂದ ಭಾಷಣದಲ್ಲಿ ಸ್ಮರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.