ಚೆನ್ನೈ: ಯುವತಿಯೊಂದಿಗಿನ ಖಾಸಗಿ ಕ್ಷಣಗಳ ಫೋಟೊ–ವಿಡಿಯೊಗಳು ಹರಿದಾಡಿದ ಮೇಲೆ ನಾಪತ್ತೆಯಾಗಿದ್ದ ತಮಿಳುನಾಡಿನ ಕನ್ಯಾಕುಮಾರಿ ಚರ್ಚ್ ಒಂದರ ಯುವ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕನ್ಯಾಕುಮಾರಿ ಬಳಿಯ ತಾಕಳಾ ಚರ್ಚ್‌ನ 29 ವರ್ಷದ ಯುವ ಪಾದ್ರಿ ಬೆನ್ಡಿಕ್ಟ್ ಆಂಟೊ ಎಂದು ಗುರುತಿಸಲಾಗಿದೆ.
ಬೆನ್ಡಿಕ್ಟ್ ಆಂಟೊ ಲ್ಯಾಪ್‌ಟಾಪ್‌ನಿಂದ ಆಸ್ಟಿನ್ ಎನ್ನುವ ಸ್ನೇಹಿತನೊಬ್ಬ ಅವರ ಖಾಸಗಿ ವಿಡಿಯೊ ಮತ್ತು ಫೋಟೊಗಳನ್ನು ಕದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇಬ್ಬರ ವಿರುದ್ಧ ಸಂತ್ರಸ್ತ ಯುವತಿ ನಾಗರ್‌ಕೋಯಿಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಘಟನೆ ಬೆಳಕಿಗೆ ಬಂದ ಮೇಲೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಬೆನ್ಡಿಕ್ಟ್ ಆಂಟೊನನ್ನು ಕನ್ಯಾಕುಮಾರಿ ಪೊಲೀಸರು ಬಂಧಿಸಿ ವಿಚಾರಣೆಗೆ ಗುರಿಪಡಿಸಿದ್ದಾರೆ. ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ಪಾದ್ರಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರ ಬಗ್ಗೆ newsbricks.com ವರದಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.