ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಧಂಪುರ, ಜಮ್ಮುವಿನಲ್ಲಿ ಸೇನೆಯಿಂದ ಕಾರ್ಗಿಲ್‌ ವಿಜಯೋತ್ಸವ ಆಚರಣೆ

Last Updated 26 ಜುಲೈ 2022, 11:22 IST
ಅಕ್ಷರ ಗಾತ್ರ

ಉಧಂಪುರ/ಜಮ್ಮು : ಪಾಕಿಸ್ತಾನ ವಿರುದ್ಧದ 1999ರ ಕಾರ್ಗಿಲ್‌ ಯುದ್ಧದ ವಿಜಯೋತ್ಸವ ಸ್ಮರಣಾರ್ಥ ಭಾರತೀಯ ಸೇನೆ ಮಂಗಳವಾರ 23ನೇ ಕಾರ್ಗಿಲ್‌ ವಿಜಯ ದಿವಸವನ್ನು ಆಚರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಆಪರೇಷನ್ ವಿಜಯ’ ಯಶಸ್ಸಿನ ಸಂಕೇತವಾಗಿ ಉಧಂಪುರದ ಉತ್ತರ ಕಮಾಂಡ್, ಜಮ್ಮುವಿನ ಟೈಗರ್‌ ಡಿವಿಷನ್ ಮತ್ತು ರಜೌರಿ, ಪೂಂಚ್ ಮತ್ತು ದೋಡಾದಲ್ಲಿ ಆಚರಣೆ ಮಾಡಲಾಯಿತು. ಉತ್ತರ ಕಮಾಂಡ್ ಮುಖ್ಯಕಚೇರಿಯಲ್ಲಿರುವ ಯುದ್ಧಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸೇನಾ ಅಧಿಕಾರಿಗಳು, ಯೋಧರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.ಟೈಗರ್‌ ಡಿವಿಷನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಸಂಖ್ಯಾತ ನಾಗರಿಕರು ಭಾಗವಹಿಸಿ ನಮನ ಸಲ್ಲಿಸಿದರು ಎಂದು ತಿಳಿಸಿದರು.

ಕಾರ್ಗಿಲ್‌ ವಿಜಯ ದಿವಸದಂದು ಹೆಮ್ಮೆಯ, ವೀರ ಯೋಧರಿಗೆಇಡೀ ಭಾರತ ನಮನ ಸಲ್ಲಿಸುತ್ತದೆ. ಸಶಸ್ತ್ರ ಪಡೆಗಳ ಶೌರ್ಯ ಮತ್ತು ಅದಮ್ಯ ಇಚ್ಛಾಶಕ್ತಿಭಾರತದ ಇತಿಹಾಸದಲ್ಲಿ ನಿರ್ಣಾಯಕ ಕ್ಷಣವಾಗಿ ಶಾಶ್ವತವಾಗಿ ಉಳಿದಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ಅ ಟ್ವೀಟ್‌ ಮಾಡಿದ್ದಾರೆ.

ದೇಶದ ಹೆಮ್ಮೆಯ ಸಂಕೇತ’: ಕಾರ್ಗಿಲ್ ವಿಜಯ್‌ ದಿವಸದ ಹಿನ್ನೆಲೆಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ತಾಯ್ನಾಡಿನ ರಕ್ಷಣೆಗಾಗಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಿರುವ ಎಲ್ಲ ವೀರಯೋಧರಿಗೆ ನಮನ ಸಲ್ಲಿಸಿದರು.

‘ಕಾರ್ಗಿಲ್‌ ವಿಜಯ ದಿವಸ ಭಾರತ ಮಾತೆಯ ಹೆಮ್ಮೆಯ ಸಂಕೇತ’ ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT