ಶುಕ್ರವಾರ, ಡಿಸೆಂಬರ್ 2, 2022
20 °C

ಜ್ಞಾನವು ಅಸಮಾನತೆ ವಿರುದ್ಧ ಹೋರಾಡುವ ಆಯುಧ: ಕೇರಳ ಸಿಎಂ ಪಿಣರಾಯಿ ವಿಜಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮಹಾನವಮಿ ಮತ್ತು ವಿಜಯದಶಮಿಯ ಶುಭ ಕೋರಿದ್ದಾರೆ. ಜ್ಞಾನವು ಒಂದು ಆಯುಧವಾಗಿದೆ. ಸಾಮಾಜಿಕ ಕಷ್ಟಗಳನ್ನು ತೊಡೆದು ಹಾಕಲು ಮತ್ತು ಅನ್ಯಾಯಗಳ ವಿರುದ್ಧ ಹೋರಾಡಲು ಜ್ಞಾನವೆಂಬುದು ಸಮರ್ಥ ಆಯುಧವಾಗಿ ಎಂದರು. 

ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದ ಶುಭ ಹಾರೈಸಿ ಪೋಸ್ಟ್‌ ಮಾಡಿರುವ ವಿಜಯನ್‌, ಉತ್ತಮ ನಾಳೆಗಳಿಗಾಗಿ ಕೈ ಜೋಡಿಸೋಣ. ಸದ್ಗುಣಗಳನ್ನು ಬೆಳೆಸಿಕೊಳ್ಳೋಣ. ಸಮಾನತೆಗಾಗಿ ಹೋರಾಡೋಣ ಎಂದು ಜನತೆಗೆ ಕರೆ ನೀಡಿದ್ದಾರೆ.

ವಿಜಯದಶಮಿಯು ದೇವಿ ಸರಸ್ವತಿಗೆ ಅರ್ಪಣೆಯಾಗಿದೆ. ಸರಸ್ವತಿ ಕಲಿಕೆಯ ದೇವತೆ. ಒಂಬತ್ತು ದಿನಗಳ ನವರಾತ್ರಿ ಉತ್ಸವವು ಈ ದಿನದೊಂದಿಗೆ ಸಂಪನ್ನಗೊಳ್ಳಲಿದೆ. ದಕ್ಷಿಣದ ರಾಜ್ಯಗಳಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸದ ದಿನವನ್ನಾಗಿ ಆಚರಿಸುವ ಪದ್ಧತಿ ಇದೆ. ಇದನ್ನು 'ವಿದ್ಯಾರಂಭಮ್‌' ಎನ್ನಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು