ಕೊಚ್ಚಿ–ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್: ಭರವಸೆ ಈಡೇರಿಸಿದ್ದೇವೆ ಎಂದ ಸಿಎಂ

ಕೊಚ್ಚಿ: ಕೊಚ್ಚಿ–ಮಂಗಳೂರು ನಡುವೆ ನೈಸರ್ಗಿಕ ಅನಿಲ ಪೈಪ್ಲೈನ್ ಪೂರ್ಣಗೊಂಡಿರುವುದನ್ನು ಶ್ಲಾಘಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಇದು ನಮ್ಮ ಸರ್ಕಾರದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಪ್ರಮುಖವಾಗಿತ್ತು. ಇದರ ಯಶಸ್ಸು, ದಕ್ಷಿಣ ರಾಜ್ಯದಲ್ಲಿ ಉದ್ಯಮವನ್ನು ಹೇಗೆ ನಡೆಸಲಾಗುತ್ತದೆ ಎನ್ನುವುದಕ್ಕೆ ಇರುವ ಸಾಕ್ಷ್ಯ’ ಎಂದಿದ್ದಾರೆ.
‘2014ರಲ್ಲಿ ಹಲವು ಅಡೆತಡೆಗಳ ಕಾರಣ ಗೇಲ್ ಸಂಸ್ಥೆಯು ಯೋಜನೆಯನ್ನು ಸ್ಥಗಿತಗೊಳಿಸಿತ್ತು. 2016ರಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ ಈ ಅಡೆತಡೆಗಳನ್ನು ನಿವಾರಿಸಿದೆವು. ಗೇಲ್ ಸಂಸ್ಥೆಯೂ ಇದರಲ್ಲಿ ಕೈಜೋಡಿಸಿತ್ತು. ಒಟ್ಟಾರೆ 450 ಕಿ.ಮೀ. ಪೈಪ್ಲೈನ್ನಲ್ಲಿ 414 ಕಿ.ಮೀ. ಪೈಪ್ಲೈನ್ ಕೇರಳದಲ್ಲೇ ಇದೆ. ಈ ಯೋಜನೆಯು ಕೇರಳದ ಜನರ ಜೀವನಶೈಲಿಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ’ ಎಂದು ವಿಜಯನ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.