ಐಎಎಸ್ ಅಧಿಕಾರಿಗಳ ನಿಯೋಜನೆ: ಪ್ರಸ್ತಾವಿತ ತಿದ್ದುಪಡಿ ವಿರೋಧಿಸಿದ ಕೇರಳ

ಬೆಂಗಳೂರು: ಅಖಿಲ ಭಾರತ ಸೇವೆಯಲ್ಲಿನ ಅಧಿಕಾರಿಗಳ ನಿಯೋಜನೆಗೆ ಸಂಬಂಧಿಸಿದಂತೆ ಪ್ರಸ್ತಾವಿತ ಹೊಸ ತಿದ್ದುಪಡಿಯನ್ನು ಕೈಬಿಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ.
ಹೊಸ ಪ್ರಸ್ತಾವಿತ ತಿದ್ದುಪಡಿಯಿಂದ ಐಎಎಸ್ ಸೇರಬಯಸುವ ಮತ್ತು ಈಗಾಗಲೇ ಸೇವೆಯಲ್ಲಿರುವ ಅಧಿಕಾರಿಗಳಲ್ಲಿ ಭಯ ಉಂಟಾಗಲಿದೆ. ಅಲ್ಲದೆ, ಐಎಎಸ್ ಸೇರ ಬಯಸುವವರು ಕೂಡ ಹಿಂಜರಿಯುವಂತಾಗಿದೆ ಎಂದು ವಿಜಯನ್ ಹೇಳಿದ್ದಾರೆ.
ಈಗಾಗಲೇ ಜಾರಿಯಲ್ಲಿರುವ ಅಧಿಕಾರಿಗಳ ನಿಯೋಜನೆಗೆ ಸಂಬಂಧಿಸಿದ ಕೇಂದ್ರದ ನಿಯಮದಲ್ಲಿ ಕೂಡ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣವಿದೆ. ಹೀಗಾಗಿ ಮತ್ತೊಂದು ತಿದ್ದುಪಡಿ ಅಗತ್ಯವಿಲ್ಲ ಎಂದು ವಿಜಯನ್ ಪತ್ರದಲ್ಲಿ ತಿಳಿಸಿದ್ದಾರೆ.
ಪಂಜಾಬ್ ಚುನಾವಣೆ: ಸಿಖ್ ಆಭ್ಯರ್ಥಿಗಳಿಗೆ ಬಿಜೆಪಿ ಮೈತ್ರಿಕೂಟ ಆದ್ಯತೆ
ಅಖಿಲ ಭಾರತ ಸೇವೆಯಲ್ಲಿನ ಅಧಿಕಾರಿಗಳನ್ನು ರಾಜ್ಯಗಳಿಗೆ ನಿಯೋಜಿಸುವುದು ಮತ್ತು ಮರಳಿ ಕೇಂದ್ರ ಸೇವೆಗೆ ಕಳುಹಿಸುವ ಕುರಿತಂತೆ ರಾಜ್ಯಗಳ ಅಧಿಕಾರವನ್ನು ಹೊಸ ತಿದ್ದುಪಡಿ ಕಡಿತಗೊಳಿಸಲಿದೆ.
ಕೋವಿಡ್ ನಿರ್ಬಂಧ: ರ್ಯಾಲಿ ರದ್ದಾಗಿ ಸಂಕಷ್ಟಕ್ಕೆ ಸಿಲುಕಿದ ಬಾಡಿಗೆ ವಿಮಾನ ಸೇವೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.