ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪರೀಕ್ಷಾ ದರ ಕಡಿತದ ವಿರುದ್ಧ ಅರ್ಜಿ ತಿರಸ್ಕರಿಸಿದ ಕೇರಳ ಹೈಕೋರ್ಟ್

ಪರೀಕ್ಷಾ ದರವನ್ನು ₹ 1,700ರಿಂದ ₹ 500ಕ್ಕೆ ಇಳಿಕೆ
Last Updated 7 ಮೇ 2021, 11:16 IST
ಅಕ್ಷರ ಗಾತ್ರ

ಕೊಚ್ಚಿ: ಕೋವಿಡ್‌ ಇರುವಿಕೆಯನ್ನು ದೃಢಪಡಿಸುವಆರ್‌ಟಿ–ಪಿಸಿಆರ್ ಪರೀಕ್ಷಾ ದರವನ್ನು ₹ 1,700ರಿಂದ ₹ 500ಕ್ಕೆ ಇಳಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಪ್ರಶ್ನಿಸಿ ಖಾಸಗಿ ಲ್ಯಾಬ್‌ಗಳು ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಮಾರುಕಟ್ಟೆಯಲ್ಲಿ ಅಧ್ಯಯನ ನಡೆಸಿಯೇ ಕೇರಳ ಸರ್ಕಾರವು ಆರ್‌ಟಿ–ಪಿಸಿಆರ್ ಪರೀಕ್ಷೆಯ ದರವನ್ನು ನಿಗದಿಪಡಿಸಿದೆ.ಹರಿಯಾಣ, ತೆಲಂಗಾಣ, ಉತ್ತರಾಖಂಡ ಸೇರಿದಂತೆ ದೇಶದ ಇತರ ರಾಜ್ಯಗಳ ವ್ಯಾಪ್ತಿಯಲ್ಲೂ ಇದೇ ರೀತಿಯ ಪರೀಕ್ಷಾ ದರವಿದೆ. ಹಾಗಾಗಿ, ಪರೀಕ್ಷಾ ದರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶವನ್ನು ನೀಡಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಮೂರ್ತಿ ಎನ್. ನಾಗರೇಶ್ ಹೇಳಿದ್ದಾರೆ.

ಕೇರಳದಲ್ಲಿರುವ ಆರ್‌ಟಿ–ಪಿಸಿಆರ್ ಕೋವಿಡ್‌–19 ಪರೀಕ್ಷಾ ದರವು ₹1,700 ದೇಶದ ಇತರೆಡೆಗಳಿಗಿಂತ ಹೆಚ್ಚಾಗಿದೆ ಎಂದು ಹಲವು ದೂರುಗಳು ಬಂದಿದ್ದವು ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT