ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಈ ಗ್ರಾಮದ ಹೆಸರೀಗ 'ಕಥಕ್ಕಳಿ'!

Last Updated 24 ಮಾರ್ಚ್ 2023, 11:23 IST
ಅಕ್ಷರ ಗಾತ್ರ

ಪತ್ತನಂತಿಟ್ಟ (ಕೇರಳ): ಕಥಕ್ಕಳಿ ಎಂಬುದು ಇಲ್ಲಿ ಶಾಸ್ತ್ರೀಯ ಸಂಗೀತ ಪ್ರಕಾರದ ಹೆಸರಷ್ಟೇ ಅಲ್ಲ, ಊರಿನ ಹೆಸರೂ ಹೌದು. ಕಥಕ್ಕಳಿ ನೃತ್ಯ ಪ್ರಕಾರಕ್ಕೆ ಹೆಸರಾಗಿದ್ದ ಕೇರಳದ ಕುಗ್ರಾಮಕ್ಕೆ ಈಗ ಅದರ ಹೆಸರನ್ನೇ ಇಡಲಾಗಿದೆ.

ಪತ್ತನಂತಿಟ್ಟ ಜಿಲ್ಲೆಯ ಪಂಪಾ ನದಿಯ ಅಚ್ಚುಕಟ್ಟು ಭಾಗದಲ್ಲಿರುವ ಆಯರೂರು ಗ್ರಾಮಕ್ಕೆ ಈಗ ‘ಆಯಿರೂರು ಕಥಕ್ಕಳಿ ಗ್ರಾಮ’ ಎಂದು ಹೆಸರಿಸಲಾಗಿದೆ. ಈ ಗ್ರಾಮವು ದಶಕಗಳಿಂದ ಕಥಕ್ಕಳಿ ನೃತ್ಯ ಪ್ರಕಾರವನ್ನು ಬೆಳೆಸುವ ಕಲಾವಿದರು, ಪ್ರಸಾಧನ ಕಲಾವಿದರು, ವಸ್ತ್ರವಿನ್ಯಾಸ ಕಲಾವಿದರ ನೆಲೆಯಾಗಿದೆ.

ಕೇರಳವು ಕಥಕ್ಕಳಿ ನೃತ್ಯ ಪ್ರಕಾರದ ನೆಲೆವೀಡು ಹೌದು. ಭಕ್ತಿ, ನೃತ್ಯ, ರಂಗಕಲೆ, ಸಂಗೀತ, ವಸ್ತ್ರವಿನ್ಯಾಸ, ಪ್ರಸಾಧನ ಎಲ್ಲವೂ ಮೆಳೈಸಿರುವ ಕಥಕ್ಕಳಿಗೆ ಕೇರಳದಲ್ಲಿ 300 ವರ್ಷಗಳ ಇತಿಹಾಸವಿದೆ.

ಆಯಿರೂರು ಗ್ರಾಮದಲ್ಲಿ ಹಿಂದೂ ಪುರಾಣಗಳ ದೃಷ್ಟಾಂತಗಳೇ ಅಲ್ಲದೆ, ಬೈಬಲ್‌ನಿಂದ ಆಯ್ದುಕೊಂಡ, ‘ಅಬ್ರಹಾಂನ ತ್ಯಾಗ’, ‘ಮೇರಿ ಮ್ಯಾಗ್ಡಲೀನ್‌‘ ರೂಪಕಗಳನ್ನು ಕಥಕ್ಕಳಿ ನೃತ್ಯ ಪ್ರಕಾರಕ್ಕೆ ಅಳವಡಿಸಲಾಗಿದೆ.

ಕಥಕ್ಕಳಿ ನೃತ್ಯ ಕಲಾವಿದರ ಕುಟುಂಬದ ಮೂರನೇ ಪೀಳಿಗೆಯ ರಾಜ್, ಸ್ವತಃ ನೃತ್ಯಗಾರನಲ್ಲದಿದ್ದರೂ ನೃತ್ಯದೆಡೆಗಿನ ಒಲವಿನಿಂದಾಗಿ 1995ರಲ್ಲಿ ಗೆಳೆಯರ ಜೊತೆಗೂಡಿ ಜಿಲ್ಲಾ ಕಥಕ್ಕಳಿ ಕ್ಲಬ್ ಅನ್ನು ಸ್ಥಾಪಿಸಿದ್ದಾರೆ.

ಈ ಕ್ಲಬ್‌ನ ಮನವಿ ಆಧರಿಸಿ ಸ್ಥಳೀಯ ಗ್ರಾಮ ಪಂಚಾಯತ್‌ ಗ್ರಾಮದ ಹೆಸರು ಬದಲಿಸಲು 2010ರಲ್ಲಿ ನಿರ್ಣಯ ಅಂಗೀಕರಿಸಿತ್ತು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಬಿಲಿ ಪ್ರಭಾಕರನ್‌ ನಾಯರ್.

ಆದರೆ, ಹೆಸರಿಡುವ ಪ್ರಕ್ರಿಯೆ ಪೂರ್ಣಗೊಳ್ಳಲು 12 ವರ್ಷವಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳ ಅನುಮೋದನೆ ಪಡೆದಿದ್ದು, ಕೋಮು ಸಮಸ್ಯೆಗೆ ಕಾರಣವಾದೀತಾ ಎಂದೂ ಪರಿಶೀಲಿಸಲಾಗಿತ್ತು ಎಂದು ರಾಜ್‌ ಸ್ಮರಿಸಿದರು.

ಆದರೆ, ಯಾವುದೇ ಆಕ್ಷೇಪ ಬರಲಿಲ್ಲ. ಗ್ರಾಮದಲ್ಲಿ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕ್ಲಬ್‌ ಯಶಸ್ವಿಯಾಗಿ ಮುನ್ನಡೆಯಲು ಅವರ ಕೊಡುಗೆಯೇ ಹೆಚ್ಚಿದೆ ಎಂದು ಹೇಳಿದರು.

ಗ್ರಾಮದಲ್ಲಿ ಮಕ್ಕಳಲ್ಲಿಯೂ ನೃತ್ಯದ ಬಗ್ಗೆ ಒಲವು ಹೆಚ್ಚುತ್ತಿದೆ. ಇದಕ್ಕೆ ಉತ್ತೇಜನ ನೀಡಲು ಕ್ಲಬ್ ಪ್ರತಿ ವರ್ಷ ಜನವರಿ ಮೊದಲ ವಾರ ಏಳು ದಿನಗಳ ಉತ್ಸವ ಆಚರಿಸುತ್ತಿದೆ. ಕಥಕ್ಕಳಿ ನೃತ್ಯದ ಪ್ರದರ್ಶನ ಇರುತ್ತದೆ.

17 ವರ್ಷದಿಂದ ಇಂತಹ ಉತ್ಸವ ನಡೆಯುತ್ತಿದೆ ಪ್ರತಿನಿತ್ಯ ಆಸುಪಾಸಿನ ಜಿಲ್ಲೆಗಳಿಂದಲೂ ಸುಮಾರು 1,500 ಮಕ್ಕಳು ಭಾಗವಹಿಸುತ್ತಾರೆ. ಇದಲ್ಲದೆ, ಪ್ರತಿವರ್ಷ ಸುಮಾರು 20 ಸಾವಿರ ಮಕ್ಕಳು ಕಥಕ್ಕಳಿ ಕುರಿತು ತಿಳಿಯಲು ಕ್ಲಬ್‌ ಸಂಪರ್ಕಿಸುತ್ತಾರೆ. ಈ ಎಲ್ಲ ಅಂಶಗಳು ಗ್ರಾಮದ ಹೆಸರು ಬದಲಿಸಲು ನೆರವಾಗಿದೆ ಎಂದು ರಾಜ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT