ಶನಿವಾರ, ಆಗಸ್ಟ್ 13, 2022
26 °C

ಮಹಿಳಾ ಸಬಲೀಕರಣ: ವಿಶ್ವಸಂಸ್ಥೆಯೊಂದಿಗೆ ಕೇರಳ ಸ್ಟಾರ್ಟ್‌ಅಪ್‌ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರಂ: ಇಂಧನ ದಕ್ಷತೆಯ ಚಾಲಕರನ್ನು ಗುರುತಿಸಿ ಮತ್ತು ಇಂಧನ ಉಳಿತಾಯಕ್ಕೆ ಅಗತ್ಯವಾದ ಕ್ರಿಯಾ ಯೋಜನೆಗಳನ್ನು ಅಳವಡಿಸಿಕೊಳ್ಳುವವರನ್ನು ಗುರುತಿಸುವಂತಹ ಕೇರಳ ಮೂಲದ ಮಹಿಳಾ ನವೋದ್ಯಮ(ಸ್ಟಾರ್ಟ್‌ ಅಪ್‌) ವಿದ್ಯುತ್ ಎನರ್ಜಿ ಸರ್ವೀಸ್‌ (ವಿಇಎಸ್‌) ವಿಶ್ವ ಸಂಸ್ಥೆಯ ಮಹಿಳಾ ಸಬಲೀಕರಣ ತತ್ವಗಳೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದೆ.

ವಿಶ್ವಸಂಸ್ಥೆಯ ಮಹಿಳಾ ಸಬಲೀಕರಣ ತತ್ವಗಳಿಗೆ ಸಹಿ ಹಾಕಿದ ಭಾರತದ 170 ಕಂಪನಿಗಳ ಪೈಕಿ 64 ಕಂಪನಿಗಳು ಖಾಸಗಿ ವಲಯದ್ದಾಗಿದೆ. ವಿಇಎಸ್‌, ವಿಶ್ವಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತದ 65 ನೇ ಕಂಪೆನಿ ಮತ್ತು ಕೇರಳದ ಮೊದಲ ಕಂಪೆನಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ವಿಶ್ವಸಂಸ್ಥೆಯ ಮಹಿಳಾ ಸಬಲೀಕರಣ ತತ್ವಗಳನ್ನು ಅಳವಡಿಸಿಕೊಂಡಿರುವ ನೀತಿ ಆಯೋಗದ ಪಟ್ಟಿಯಲ್ಲಿ ಕೇರಳವು ಪ್ರಮುಖ ಸ್ಥಾನದಲ್ಲಿದೆ. ಈಗ ಸಹಿ ಹಾಕಿರುವ ವಿಶ್ವಸಂಸ್ಥೆಯ ಮಹಿಳೆಯರ ಸಬಲೀಕರಣ ತತ್ವಗಳು ಯೋಜನೆಯು ಕೆಲಸದ ಸ್ಥಳ, ಮಾರುಕಟ್ಟೆ ಮತ್ತು ಸಮುದಾಯದಲ್ಲಿ ಮಹಿಳೆಯರನ್ನು ಹೇಗೆ ಸಬಲೀಕರಣಗೊಳಿಸುವ ಬಗ್ಗೆ ವ್ಯಾಪಾರ ಮತ್ತು ಖಾಸಗಿ ವಲಯಗಳಲ್ಲಿರುವವರಿಗೆ ಪ್ರಾಯೋಗಿಕ ಮಾರ್ಗದರ್ಶನ ನೀಡುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು