ಸೋಮವಾರ, ಸೆಪ್ಟೆಂಬರ್ 20, 2021
26 °C

ರಸ್ತೆ ಜಾಲ ಮೇಲ್ದರ್ಜೆಗೆ: ಲಡಾಖ್‌ ಸರ್ಕಾರ , ಬಿಆರ್‌ಒ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲೇಹ್‌: ಲಡಾಖ್‌ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ರಸ್ತೆ ಸಂಪರ್ಕ ಜಾಲದ ಸುಧಾರಣೆ ಮತ್ತು ಮೇಲ್ದರ್ಜೆಗೇರಿಸುವ ಸಂಬಂಧ ಲಡಾಖ್ ಆಡಳಿತ ಮತ್ತು ಬಾರ್ಡರ್‌ ರೋಡ್‌ ಆರ್ಗನೈಜೇಷನ್‌(ಬಿಆರ್‌ಒ) ಐತಿಹಾಸಿಕ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಈ ಯೋಜನೆ ಜೊತೆಗೆ, ಗುಡ್ಡಗಾಡು ಪ್ರದೇಶಗಳಲ್ಲಿ ಸುರಂಗಗಳು ಮತ್ತು ರಸ್ತೆಗಳನ್ನು ನಿರ್ಮಿಸುವಲ್ಲಿರುವ ಬಿಆರ್‌ಒ ಸಂಸ್ಥೆಯ ಪರಿಣತಿ ಹೊಂದಿದೆ. ಇದನ್ನು ಪರಿಗಣಿಸಿ ಒಟ್ಟು ಏಳು ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ಬಿಆರ್‌ಒಗೆ ವಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಉಪಕ್ರಮದಿಂದ ದೀರ್ಘಾವಧಿಯಲ್ಲಿ ಲಡಾಖ್‌ ಕೇಂದ್ರಾಡಳಿತ ಪ್ರದೇಶ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಪ್ರಾಜೆಕ್ಟ್‌ ಹಿಮಂಕ್‌’ನ ಮುಖ್ಯ ಎಂಜಿನಿಯರ್‌ ಬ್ರಿಗೇಡಿಯರ್ ಅರವಿಂದ್‌ ಸಿಂಗ್, ‘ಪ್ರಾಜೆಕ್ಟ್‌ ವಿಜಯಕ್‘ ಮುಖ್ಯ ಎಂಜಿನಿಯರ್‌ ಬ್ರಿಗೇಡಿಯರ್ ಆಶಿಷ್‌ ಗಂಭೀರ್‌ ಮತ್ತು ಲಡಾಖ್‌ನ ರಸ್ತೆ ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಪಿ.ಸಿ. ತನೋಚ್‌ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.

ಲಡಾಖ್‌ನಲ್ಲಿ ರಸ್ತೆ ಹಾಗೂ ಸೇತುವೆಗಳು ಸೇರಿದಂತೆ ಸಂಪರ್ಕ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಿಆರ್‌ಒ, ‘ಪ್ರಾಜೆಕ್ಟ್‌ ಹಿಮಂಕ್‌’ ಹಾಗೂ ‘ಪ್ರಾಜೆಕ್ಟ್‌ ವಿಜಯಕ್‘ ಹೆಸರಿನ ಯೋಜನೆಗಳನ್ನು ರೂಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು