ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ, ವಿರೋಧ ಪಕ್ಷಗಳ ಶಾಸಕರು ಉತ್ತಮ ಸಂಬಂಧ ಹೊಂದಿರಬೇಕು: ಗುಲಾಂ ನಬಿ ಆಜಾದ್

Last Updated 13 ಸೆಪ್ಟೆಂಬರ್ 2021, 11:39 IST
ಅಕ್ಷರ ಗಾತ್ರ

ಜೈಪುರ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸೋಮವಾರ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ಹೊಂದಾಣಿಕೆ ಮತ್ತು ಉತ್ತಮ ಬಾಂಧವ್ಯ ಹೊಂದಿರುವುದು ಮುಖ್ಯ ಎಂದು ಕರೆ ನೀಡಿದ್ದಾರೆ. ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ 'ಸಂಸದೀಯ ವ್ಯವಸ್ಥೆ ಮತ್ತು ಜನರ ನಿರೀಕ್ಷೆಗಳು' ಕುರಿತ ಸೆಮಿನಾರ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಸಕಾಂಗದಲ್ಲಿ ತಿಳಿವಳಿಕೆಯು ಒಂದು ಪ್ರಮುಖ ಅಂಶವಾಗಿದೆ ಮತ್ತು ಸದಸ್ಯರಲ್ಲಿ ಉತ್ತಮ ತಿಳಿವಳಿಕೆ ಇದ್ದಾಗ ಮಾತ್ರ ಒಳ್ಳೆಯ ಕೆಲಸಕ್ಕೆ ಬೆಂಬಲ ಸಿಗುತ್ತದೆ ಎಂದರು.

'ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಹೊಂದಾಣಿಕೆ ಮತ್ತು ಉತ್ತಮ ಬಾಂಧವ್ಯ ಹೊಂದಿರಬೇಕು. ಒಳ್ಳೆಯ ಕೆಲಸಕ್ಕೆ ಬೆಂಬಲ ಸಿಗಬೇಕಾದರೆ ಅಲ್ಲಿ ಉತ್ತಮ ತಿಳಿವಳಿಕೆಯ ಅಗತ್ಯವಿರುತ್ತದೆ. ಒಂದು ವೇಳೆ ಅಂತರವಿದ್ದರೆ ಒಳ್ಳೆಯ ಕೆಲಸಕ್ಕೂ ಬೆಂಬಲ ಸಿಗುವುದಿಲ್ಲ. ಆದ್ದರಿಂದ, ಶಾಸಕರ ನಡುವೆ ಉತ್ತಮ ಕೆಲಸದ ಸಂಬಂಧಗಳನ್ನು ಹೊಂದುವ ಅಗತ್ಯವಿದೆ' ಎಂದು ಅವರು ಹೇಳಿದರು.

ವಿರೋಧ ಪಕ್ಷಗಳ ನಾಯಕರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡ ಆಜಾದ್, 'ತಾವು ಕೇಂದ್ರ ಸಂಸದೀಯ ವ್ಯವಹಾರಗಳ ಮಂತ್ರಿಯಾಗಿದ್ದಾಗ, ಆಗಿನ ವಿರೋಧ ಪಕ್ಷದ ನಾಯಕ ವಾಜಪೇಯಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೆ ಮತ್ತು ಅವರು ಎರಡು ಮೂರು ದಿನಗಳಿಗೊಮ್ಮೆ ಒಟ್ಟಾಗಿ ಊಟ ಮಾಡುತ್ತಿದ್ದೆವು'. ಎಂದು ಹೇಳಿದರು.

ಚುನಾವಣೆ ಸಮಯದಲ್ಲಿ ಮಾತ್ರ ಭಿನ್ನಾಭಿಪ್ರಾಯಗಳನ್ನು ನೋಡಬೇಕು. ನಾನೆಂದಿಗೂ ಪ್ರತಿಸ್ಪರ್ಧಿ ಅಭ್ಯರ್ಥಿಯ ಹೆಸರನ್ನು ಉಲ್ಲೇಖಿಸುತ್ತಿರಲಿಲ್ಲ. ಚುನಾವಣಾ ರ‍್ಯಾಲಿಗಳಲ್ಲಿ, ನಾವು ಏನು ಮಾಡುತ್ತೇವೆ ಎಂಬುದನ್ನಷ್ಟೇ ಜನರಿಗೆ ಹೇಳಬೇಕು' ಎಂದು ಅವರು ತಿಳಿಸಿದರು.

'ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳ ಪಾತ್ರ ಮತ್ತು ಜವಾಬ್ದಾರಿಗಳನ್ನು ಸಂವಿಧಾನದಲ್ಲಿ ಉತ್ತಮವಾಗಿ ವ್ಯಾಖ್ಯಾನಿಸಲಾಗಿದೆ. ಆದಾಗ್ಯೂ, ಶಾಸಕಾಂಗವು ಇವುಗಳಲ್ಲಿ ಮೊದಲನೆಯದು. ಭಾರತದಲ್ಲಿ ಶಾಸಕರು ಕಾನೂನುಗಳನ್ನು ರೂಪಿಸುವುದರ ಹೊರತಾಗಿಯೂ, ‌ತಮ್ಮ ಕ್ಷೇತ್ರದತ್ತ ಗಮನಹರಿಸಬೇಕು ಮತ್ತು ನೀರು ಅಥವಾ ವಿದ್ಯುತ್‌ಗೆ ಸಂಬಂಧಿಸಿದ ಜನರ ವಿವಿಧ ಬೇಡಿಕೆಗಳನ್ನು ಪರಿಹರಿಸಬೇಕು ಎಂದು ಅವರು ಹೇಳಿದರು.

ನಿಯಮಗಳನ್ನು ಅನುಸರಿಸುವ ಮತ್ತು ಅರ್ಥಮಾಡಿಕೊಳ್ಳುವ ಮೂಲಕ ಶಾಸಕರು ಸದನದ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT