ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಾನಿ ನಿವಾಸದ ಬಳಿ ಸ್ಫೋಟಕ: ‘ಜೈಷ್‌ ಉಲ್‌ ಹಿಂದ್‌’ ಹೆಸರಲ್ಲಿ ನಕಲಿ ಪತ್ರ

ಅಂಬಾನಿ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣ: ಪೊಲೀಸರ ಹೇಳಿಕೆ
Last Updated 3 ಮಾರ್ಚ್ 2021, 6:28 IST
ಅಕ್ಷರ ಗಾತ್ರ

ಮುಂಬೈ: ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ನಿಲ್ಲಿಸಿದ್ದ ಹೊಣೆಯನ್ನು ಹೊತ್ತುಕೊಂಡು ‘ಜೈಷ್‌ ಉಲ್‌’ ಹಿಂದ್‌’ ಹೆಸರಿನಲ್ಲಿ ಬರೆದಿದ್ದ ಪತ್ರ ನಕಲಿ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಟೆಲಿಗ್ರಾಂ ಆ್ಯಪ್‌ ಮೂಲಕ ಈ ಸಂಘಟನೆ ಹೆಸರಿನಲ್ಲಿ ಪತ್ರ ಕಳುಹಿಸಲಾಗಿತ್ತು. ಕ್ರಿಪ್ಟೊ ಕರೆನ್ಸಿ ಮೂಲಕ ಹಣ ಪಾವತಿಸುವಂತೆ ಸೂಚಿಸಿ ವೆಬ್‌ಪೇಜ್‌ನ ಲಿಂಕ್‌ ನೀಡಲಾಗಿತ್ತು.

ಅದೇ ದಿನ ಸಂಜೆ, ನಿಜವಾದ ‘ಜೈಷ್‌ ಉಲ್‌ ಹಿಂದ್‌’ ಸಂಘಟನೆ ತಮ್ಮದು ಎಂದು ಹೇಳಿಕೊಂಡು ಪತ್ರವೊಂದನ್ನು ಪೋಸ್ಟ್‌ ಮಾಡಲಾಗಿದೆ. ಅಂಬಾನಿ ಮನೆ ಬಳಿಕ ಪತ್ತೆಯಾದ ಕಾರಿಗೂ ಸಂಘಟನೆಗೂ ಯಾವುದೇ ರೀತಿ ಸಂಬಂಧವಿಲ್ಲ ಮತ್ತು ಹಣ ಪಾವತಿಯ ಬಗ್ಗೆ ಯಾವುದೇ ಸಂದೇಶ ಪೋಸ್ಟ್‌ ಮಾಡಿಲ್ಲ ಎಂದು ತಿಳಿಸಿದೆ.

ಈ ಬಗ್ಗೆ ತನಿಖೆ ನಡೆಸಿದ ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು, ಮೊದಲನೇ ಪತ್ರದಲ್ಲಿ ನಮೂದಿಸಲಾಗಿದ್ದ ಲಿಂಕ್‌ನಿಂದ ಯಾವುದೇ ವೆಬ್‌ಪೇಜ್‌ ಪತ್ತೆಯಾಗಲಿಲ್ಲ. ಹೀಗಾಗಿ, ಮೊದಲ ಪತ್ರ ನಕಲಿಯಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಜೆಲೆಟಿನ್‌ ಕಡ್ಡಿಗಳಿದ್ದ ವಾಹನವೊಂದು ಅಂಬಾನಿ ಮನೆ ಬಳಿ ಗುರುವಾರ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT