ತಮಿಳುನಾಡಿನಲ್ಲಿ ಕೋವಿಡ್ನಿಂದ ಒಂದು ಸಿಂಹಿಣಿ ಸಾವು: 9 ಸಿಂಹಗಳಿಗೆ ಸೋಂಕು

ಚೆನ್ನೈ: ತಮಿಳುನಾಡಿನ ವಂಡಲೂರ್ ಎಂಬಲ್ಲಿರುವ ‘ಅರಿಗ್ನರ್ ಅಣ್ಣಾ ಜೈವಿಕ ಉದ್ಯಾನ‘ದ ಸಿಂಹವೊಂದು ಕೊರೊನಾ ವೈರಸ್ಗೆ ಬಲಿಯಾಗಿದೆ. ಮೃಗಾಲಯದ ಇನ್ನೂ 9 ಸಿಂಹಗಳಿಗೂ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸಫಾರಿಯಲ್ಲಿದ್ದ ಒಂಬತ್ತು ವರ್ಷದ 'ನೀಲಾ' ಎಂಬ ಸಿಂಹಿಣಿ ಗುರುವಾರ ವೈರಸ್ಗೆ ಬಲಿಯಾಗಿದೆ. ತಮಿಳುನಾಡಿನಲ್ಲಿ ಕೊರೊನಾ ವೈರಸ್ಗೆ ಸಿಂಹ ಬಲಿಯಾಗಿರುವುದು ಇದೇ ಮೊದಲು. ಜೈವಿಕ ಉದ್ಯಾನದ 11 ಸಿಂಹಗಳ ಪೈಕಿ ಇನ್ನೂ 9 ಸಿಂಹಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಚೆನ್ನೈ ನಗರದಿಂದ 35 ಕಿ.ಮೀ ದೂರದಲ್ಲಿರುವ ವಂಡಲೂರಿನಲ್ಲಿ 602 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನವು ಲಾಕ್ಡೌನ್ ಜಾರಿಯಾದ ನಂತರ ಮುಚ್ಚಲಾಗಿತ್ತು.
‘ಸಿಂಹಗಳು ಸೋಂಕಿಗೆ ಒಳಗಾಗಿರುವುದು ಮೇ 26 ರಂದು ಬೆಳಕಿಗೆ ಗೊತ್ತಾಯಿತು. 5 ಸಿಂಹಗಳು ಆಹಾರ ಸೇವಿಸುವುದು ಬಿಟ್ಟಿದ್ದವು. ಆಗಾಗ್ಗೆ ಕೆಮ್ಮುತ್ತಿದ್ದವು,‘ ಎಂದು ಉದ್ಯಾನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.