ಭಾನುವಾರ, ಫೆಬ್ರವರಿ 5, 2023
21 °C

ಸಹ ಜೀವನದಲ್ಲಿ ವಿರಸ: ಗೆಳೆಯನಿಂದ ಇರಿದು ಮಹಿಳೆಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 35 ವರ್ಷದ ಮಹಿಳೆಯನ್ನು ಆಕೆಯ ಸಹ ಜೀವನ ಗೆಳೆಯ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾದ ಘಟನೆ ಶುಕ್ರವಾರ ಪಶ್ಚಿಮ ದೆಹಲಿಯ ತಿಲಕ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರೇಖಾರಾಣಿ ಮೃತಳು. ಇರಿತದ ಗಾಯಗಳೊಂದಿಗೆ ಆಕೆಯ ಶವ ಗಣೇಶನಗರದ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ.

ಕೊಲೆ ಆರೋಪದ ಮೇಲೆ ಆಕೆಯ ಗೆಳೆಯ ಮನ್‌ಪ್ರೀತ್‌ ಸೀಂ‌ಗ್‌ (45) ಎಂಬವನನ್ನು ಪೊಲೀಸರು ಪಂಜಾಬ್‌ನಲ್ಲಿ ಬಂಧಿಸಿದ್ದಾರೆ. 

ರೇಖಾರಾಣಿ ಮಗಳೊಂದಿಗೆ ವಾಸವಿದ್ದರು. 2015ರಲ್ಲಿ ಸಿಂಗ್ ಪರಿಚಿತನಾಗಿದ್ದ. ಒಟ್ಟಿಗೆ ವಾಸವಿದ್ದರು. ಈಚೆಗೆ ಸಂಬಂಧ ಹಳಸಿದ್ದು ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳ ‍ಪುತ್ರಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು