ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಲ್ ಸರ್ಕಲ್ಸ್ ಸಮೀಕ್ಷೆ ವರದಿ: ಮೋದಿ ಸರ್ಕಾರದ ಜನಪ್ರಿಯತೆ ಕುಸಿತ

Last Updated 28 ಮೇ 2021, 22:11 IST
ಅಕ್ಷರ ಗಾತ್ರ

‘ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-2 ಸರ್ಕಾರದ ಜನಪ್ರಿಯತೆ ಕುಗ್ಗಿದೆ. 2020ಕ್ಕೆ ಹೋಲಿಸಿದರೆ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆಯಲ್ಲಿ 11 ಶೇಕಡಾವಾರು ಅಂಶಗಳಷ್ಟು ಇಳಿಕೆಯಾಗಿದೆ. ಕೋವಿಡ್‌ನ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲವಾದದ್ದೇ ಜನಪ್ರಿಯತೆ ಇಳಿಕೆಗೆ ಕಾರಣ’ ಎಂದು ಲೋಕಲ್ ಸರ್ಕಲ್ಸ್‌ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ. 70 ಸಾವಿರ ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. 1.69 ಲಕ್ಷ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇವುಗಳ ಆಧಾರದ ಮೇಲೆ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಲಾಗಿದೆ

*ಕೋವಿಡ್‌ ಮೊದಲ ಅಲೆಯನ್ನು ಸರ್ಕಾರ ಉತ್ತಮವಾಗಿ ನಿರ್ವಹಣೆ ಮಾಡಿದೆ ಎಂದು ಶೇ 66ರಷ್ಟು ಜನರು ಹೇಳಿದ್ದಾರೆ

* ಕೋವಿಡ್‌ ಲಸಿಕೆ ಕಾರ್ಯಕ್ರಮವನ್ನು ಸರ್ಕಾರವು ಉತ್ತಮವಾಗಿ ನಿರ್ವಹಣೆ ಮಾಡಿದೆ ಎಂದು ಶೇ 55ರಷ್ಟು ಜನರು ಹೇಳಿದ್ದಾರೆ

* ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಶೇ 61ರಷ್ಟು ಜನರು ಹೇಳಿದ್ದಾರೆ. ಶೇ 27ರಷ್ಟು ಜನರು ನಿರುದ್ಯೋಗ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಿದೆ ಎಂದಿದ್ದಾರೆ

* ದೇಶದಲ್ಲಿ ಕಳೆದ ಎರಡು ವರ್ಷದಲ್ಲಿ ಭ್ರಷ್ಟಾಚಾರದ ಪ್ರಮಾಣ ಇಳಿಕೆಯಾಗಿಲ್ಲ ಎಂದು ಶೇ 51ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರವು ಭ್ರಷ್ಟಾಚಾರವನ್ನು ನಿಯಂತ್ರಿಸಿದೆ ಎಂದು ಶೇ 39ರಷ್ಟು ಜನರು ಹೇಳಿದ್ದಾರೆ

* ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಏರಿಕೆಯಾಗಿದೆ ಎಂದು ಶೇ 59ರಷ್ಟು ಜನರು ಹೇಳಿದ್ದರೆ, ಇಳಿಕೆಯಾಗಿದೆ ಎಂದು ಶೇ 35ರಷ್ಟು ಜನರು ಹೇಳಿದ್ದಾರೆ

* ಮೋದಿ ಅವರ ಎನ್‌ಡಿಎ-2 ಸರ್ಕಾರವು ಸಂಸದೀಯ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದೆ ಎಂದು ಶೇ 61ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಸರಿಯಾಗಿ ನಿರ್ವಹಿಸಿಲ್ಲ ಎಂದು ಶೇ 33ರಷ್ಟು ಜನರು ಹೇಳಿದ್ದಾರೆ

* ಎರಡು ವರ್ಷಗಳಲ್ಲಿ ಅಗತ್ಯವಸ್ತುಗಳ ಬೆಲೆ ಮತ್ತು ಜೀವನ ನಿರ್ವಹಣೆ ವೆಚ್ಚವು ಇಳಿಕೆಯಾಗಿಲ್ಲ ಎಂದು ಶೇ 77ರಷ್ಟು ಜನರು ಹೇಳಿದ್ದಾರೆ. ಇಳಿಕೆಯಾಗಿದೆ ಎಂದು ಶೇ 19ರಷ್ಟು ಜನರು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT