ಶನಿವಾರ, ಸೆಪ್ಟೆಂಬರ್ 18, 2021
21 °C

ಪಕ್ಷದ ಹಿರಿಮೆ ಪುನರ್ ಸ್ಥಾಪಿಸುವೆ: ಶಶಿಕಲಾ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಎಂ.ಜಿ ರಾಮಚಂದ್ರನ್ ಮತ್ತು ಜೆ.ಜಯಲಲಿತಾ ಅವರ ಅವಧಿಯಲ್ಲಿ ಪಕ್ಷವು ಹೊಂದಿದ್ದ ಹಿರಿಮೆಯನ್ನು ಪುನರ್‌ ಸ್ಥಾಪಿಸುವುದಾಗಿ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ ಅವರು ಭಾನುವಾರ ಭರವಸೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಕೆ.ಪಳನಿಸ್ವಾಮಿ ಅವರು ಪ್ರತಿನಿಧಿಸುವ ಎಡಪ್ಪಡಿ ವಿಧಾನಸಭಾ ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ‘ಎಐಎಡಿಎಂಕೆಗೆ ಮರಳಲು ದೃಢ ನಿಶ್ಚಯ ಮಾಡಿದ್ದು, ಪಕ್ಷದ ಭವಿಷ್ಯದ ಕುರಿತು ಚಿಂತೆ ಮಾಡಬೇಡಿ’ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ.

ಪಕ್ಷವು ಒಂದು ನಿರ್ದಿಷ್ಟ ಜಾತಿಯ ಕಡೆಗೆ ವಾಲುತ್ತಿರುವ ಕುರಿತು ಪಕ್ಷದ ಕಾರ್ಯಕರ್ತ ಬಾಲು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ ಅವರು, ‘ಕೊಂಗು ಪ್ರದೇಶದ ಜನರು ಎಐಎಡಿಎಂಕೆಗೆ ತೋರಿಸಿದ ಬೆಂಬಲ ಮತ್ತು ಪ್ರೀತಿಗೆ ಪ್ರತಿಫಲ ತೋರಿಸುವ ಸಲುವಾಗಿ ಪಳನಿಸ್ವಾಮಿ ಅವರನ್ನು ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದೆ. ಆ ಸಮಯದಲ್ಲಿ ಬೇರೆ ಆಲೋಚನೆಯನ್ನೇ ನಾನು ಮಾಡಲಿಲ್ಲ’ ಎಂದು ಹೇಳಿದರು.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು