ಸೋಮವಾರ, ಮಾರ್ಚ್ 27, 2023
32 °C

ಚುನಾವಣಾ ಅಕ್ರಮದ ಆರೋಪ: ಶಶಿ ತರೂರ್‌ ವಿರುದ್ಧ ಮಿಸ್ತ್ರಿ ಅಸಮಾಧಾನ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದ, ಪರಾಜಿತ ಅಭ್ಯರ್ಥಿ ಶಶಿ ತರೂರ್‌ ಅವರ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಉತ್ತರ ಪ್ರದೇಶದ ಚುನಾವಣೆಯಲ್ಲಿ ಗಂಭೀರವಾದ ಅಕ್ರಮ ನಡೆದಿದೆ ಎಂದು ಶಶಿ ತರೂರ್ ಅವರ ಚುನಾವಣಾ ಏಜೆಂಟ್, ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಗೆ ದೂರು ಸಲ್ಲಿಸಿದ್ದರು. ಉತ್ತರ ಪ್ರದೇಶದಲ್ಲಿ ಹಾಕಲಾಗಿರುವ ಎಲ್ಲ ಮತಗಳನ್ನು ಅಮಾನ್ಯ ಮಾಡುವಂತೆ ಅವರು ಒತ್ತಾಯಿಸಿದ್ದರು.

‘ನಿಮ್ಮ ಮನವಿಗೆ ನಾವು ಮನ್ನಣೆ ನೀಡಿದ್ದೆವು. ಆದರೆ, ಅದರ ಹೊರತಾಗಿಯೂ ನೀವು ಕೇಂದ್ರ ಚುನಾವಣಾ ಪ್ರಾಧಿಕಾರ ನನ್ನ ವಿರುದ್ಧ ಪಿತೂರಿ ನಡೆಸುತ್ತಿದೆ’ ಎಂದು ಆರೋಪಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೀರಿ’ ಎಂದು ಮಧುಸೂದನ್ ಮಿಸ್ತ್ರಿ ಅವರು ಶಶಿ ತರೂರ್‌ ಅವರ ಏಜೆಂಟರಿಗೆ ತಿಳಿಸಿದ್ದಾರೆ.

‘ನೀವು ನಮ್ಮೊಂದಿಗೆ ಒಂದು ಮುಖ ತೋರಿಸಿದ್ದೀರಿ. ಮಾಧ್ಯಮಗಳೊಂದಿಗೆ ಮತ್ತೊಂದು ಮುಖ ತೋರಿಸಿದ್ದೀರಿ. ನಿಮ್ಮ ದೂರಿಗೆ ಸಂಬಂಧಿಸಿದಂತೆ ನಾವು ನೀಡಿದ ಉತ್ತರಗಳಿಂದ ತೃಪ್ತರಾಗಿರುವುದಾಗಿ ಹೇಳಿದ ನೀವು, ಮಾಧ್ಯಮಗಳ ಎದುರು ಹೋಗಿ ನಮ್ಮ ವಿರುದ್ಧವೇ ಆರೋಪ ಮಾಡಿದ್ದೀರಿ’ ಎಂದು ಮಿಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು