ಸೋಮವಾರ, ನವೆಂಬರ್ 30, 2020
19 °C

ಮಧ್ಯಪ್ರದೇಶ| ಮಹಿಳೆ ಕುರಿತ ಅವಹೇಳನಕಾರಿ ಮಾತು: ಈಗ ಬಿಜೆಪಿ ಸಚಿವನ ಸರದಿ

ಪಿಟಿಐ Updated:

ಅಕ್ಷರ ಗಾತ್ರ : | |

ಅನುಪುರ: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರು ಮಾಜಿ ಸಚಿವೆ ಇಮರತಿ ದೇವಿ ಅವರ ವಿರುದ್ಧ ಕೀಳು ಪದ ಬಳಸಿರುವ ವಿವಾದ ತಣ್ಣಗಾಗುವ ಮೊದಲೇ ಬಿಜೆಪಿ ಸಚಿವ ಕಾಂಗ್ರೆಸ್‌ ಅಭ್ಯರ್ಥಿಯ ಪತ್ನಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಬಿಜೆಪಿ ಮಹಿಳಾ ಅಭ್ಯರ್ಥಿ ವಿರುದ್ಧ ಕಮಲನಾಥ್‌ ಆಕ್ಷೇಪಾರ್ಹ ಪದ ಬಳಕೆ: ವಿವಾದ

ಬಿಜೆಪಿ ಸಚಿವ ಬಿಸಾಹುಲಾಲ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿಶ್ವನಾಥ್ ಸಿಂಗ್ ಕುಂಜಮ್ ಅವರ ಪತ್ನಿಯನ್ನು (ರಖೇಲ್‌) ‘ಪ್ರೇಯಸಿ’ ಎಂದು ಹೇಳಿರುವುದು ಸೋಮವಾರ ವೈರಲ್ ಆದ ವಿಡಿಯೋವೊಂದರಲ್ಲಿ ಬಹಿರಂಗವಾಗಿದೆ.

ವಿಶ್ವನಾಥ್‌ ಸಿಂಗ್‌ ಕುಂಜಮ್‌ ಅವರು ಅನುಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.

‘ವಿಶ್ವನಾಥ್ ಸಿಂಗ್ ತನ್ನ ಮೊದಲ ಪತ್ನಿಯ ಮಾಹಿತಿಯನ್ನು ಏಕೆ ಮರೆಮಾಚುತ್ತಿದ್ದಾರೆ. ನಾಮಪತ್ರದಲ್ಲಿ ತಮ್ಮ ಪ್ರೇಯಸಿಯನ್ನು ಯಾಕೆ ಉಲ್ಲೇಖಿಸಿದ್ದಾರೆ. ಅವರು ತಮ್ಮ ಮೊದಲ ಪತ್ನಿಯ ಮಾಹಿತಿ ನೀಡದೇ, ಪ್ರೇಯಸಿಯ ಮಾಹಿತಿ ಕೊಟ್ಟಿದ್ದಾರೆ,’ ಎಂದು ಹೇಳಿರುವುದು ವಿಡಿಯೊದಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ವಿಶ್ವನಾಥ್‌ ಸಿಂಗ್‌, ಬಿಸಾಹುಲಾಲ್‌ ಸಿಂಗ್‌ ಅವರ ಆರೋಪ ನಿರಾಧಾರ ಎಂದಿದ್ದಾರೆ.
‘ನಾನು 15 ವರ್ಷಗಳ ಹಿಂದೆ ಮದುವೆಯಾಗಿದ್ದೇನೆ. ನನಗೆ 14 ವರ್ಷದ ಮಗಳಿದ್ದಾಳೆ. ಬಿಸಾಹುಲಾಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಅವರ ಹೇಳಿಕೆಯು ಅವರ ವ್ಯಕ್ತಿತ್ವವನ್ನು ಬಯಲು ಮಾಡಿದೆ. ಒಂದು ಕಡೆ ಅವರು ಉಪವಾಸ ಧರಣಿಯ ನಾಟಕವಾಡುತ್ತಾರೆ. ಮತ್ತೊಂದೆಡೆ, ಮಹಿಳೆಯರಿಗೆ ಅಗೌರವ ತೋರುತ್ತಾರೆ,’ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಲು ಸಚಿವ ಬಿಸಾಹುಲಾಲ್‌ ಅವರು ಲಭ್ಯರಾಗಿಲ್ಲ. ಅವರು ಪ್ರಚಾರ ಕಾರ್ಯದಲ್ಲಿ ತೊಡಗಿರುವುದರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಬಿಜೆಪಿ ವಕ್ತಾರ ರಜನೀಶ್‌ ಅಗರ್‌ವಾಲ್‌ ಹೇಳಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್‌ನ ಹಿರಿಯ ನಾಯಕ ಕಮಲನಾಥ್‌ ಅವರು ಬಿಜೆಪಿ ಮಹಿಳಾ ಅಭ್ಯರ್ಥಿ, ಮಾಜಿ ಸಚಿವೆ ಇಮರತಿ ದೇವಿ ಅವರನ್ನು ‘ಐಟಂ’ ಎಂದು ಕರೆದಿದ್ದರು. ಈ ಬಗ್ಗೆ ಬಿಜೆಪಿ ಪ್ರತಿಭಟನೆಯನ್ನೂ ಕೈಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು