ಬೆತುಲ್(ಮಧ್ಯಪ್ರದೇಶ):ಕೆಲ ರಾಜ್ಯಗಳಲ್ಲಿ ಗಲಭೆಕೋರರ ಆಸ್ತಿ ಧ್ವಂಸ ಮಾಡಲು ಬುಲ್ಡೋಜರ್‌ಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದರೆ, ಮಧ್ಯಪ್ರದೇಶದ ವರ ತನ್ನ ಮದುವೆ ಮೆರವಣಿಗೆಗೆ ಕುದುರೆ ಅಥವಾ ಕಾರಿನಬದಲಾಗಿ ಬುಲ್ಡೋಜರ್ ಆರಿಸಿಕೊಂಡಿದ್ದಾನೆ.
ಬೆತುಲ್ ಜಿಲ್ಲೆಯ ಜಲ್ಲಾರ್ ಗ್ರಾಮದಲ್ಲಿ ಬುಧವಾರ ನಡೆದ ಮದುವೆ ಮೆರವಣಿಗೆಯಲ್ಲಿ ಅಲಂಕೃತ ಬುಲ್ಡೋಜರ್‌ನಲ್ಲಿ ವರ ಅಂಕುಶ್ ಜೈಸ್ವಾಲ್ ಅವರೊಂದಿಗೆ ಕುಟುಂಬದ ಇಬ್ಬರು ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.ಮೆರವಣಿಗೆಯ ಫೋಟೊ ಮತ್ತು ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಜೈಸ್ವಾಲ್, ತಮ್ಮ ಕೆಲಸದ ಭಾಗವಾಗಿ ಪ್ರತಿದಿನ ಬುಲ್ಡೋಜರ್ ಸೇರಿದಂತೆ ನಿರ್ಮಾಣಕ್ಕೆ ಸಂಬಂಧಿಸಿದ ಯಂತ್ರಗಳೊಂದಿಗೆ ಕೆಲಸ ಮಾಡುತ್ತಿದ್ದರು. ’ನನ್ನ ಮದುವೆ ಭಾಗವಾಗಿ ಅಂತಹ ಸಾಧನಗಳನ್ನು ಬಳಸಬೇಕು ಎಂಬ ಆಲೋಚನೆ ಮನಸ್ಸಿಗೆ ಬಂತು’ ಎಂದು ಜೈಸ್ವಾಲ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.