ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ‘ಕರೆನ್ಸಿ ನೋಟ್ ಪ್ರೆಸ್’(ಸಿಎನ್‌ಪಿ) ನಿಂದ ಅಪರಿಚಿತರು ಕಳೆದ ಐದು ತಿಂಗಳುಗಳಲ್ಲಿ ₹5 ಲಕ್ಷ ಮೌಲ್ಯದ ನೋಟುಗಳನ್ನು ಕದ್ದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಫೆಬ್ರವರಿ 12 ಮತ್ತು ಜುಲೈ 12, 2021 ರ ನಡುವೆ ಅಪರಿಚಿತರು ₹500 ಮುಖಬೆಲೆಯ ₹5 ಲಕ್ಷ ಹಣ ಕದ್ದಿದ್ದಾರೆ ಎಂದು ‘ಇಂಡಿಯಾ ಸೆಕ್ಯುರಿಟಿ ಪ್ರೆಸ್‘ನ ವ್ಯವಸ್ಥಾಪಕ ದೂರು ಸಲ್ಲಿಸಿದ್ದಾರೆ. ಇದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ಕಳೆದ ಐದು ತಿಂಗಳುಗಳಲ್ಲಿ ನೋಟುಗಳು ಕಾಣೆಯಾಗುತ್ತಿವೆ ಎಂದು ತಿಳಿದ ಕೂಡಲೇ ಅಂತರಿಕ ತನಿಖೆ ನಡೆಸಲಾಯಿತು. ನಂತರ ಪೊಲೀಸರಿಗೆ ದೂರು ನೀಡಲಾಯಿತು,’ ಎಂದು ಅಧಿಕಾರಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ 380 (ವಾಸದ ಮನೆಯಲ್ಲಿ ಕಳ್ಳತನ, ಇತ್ಯಾದಿ), 454 (ಮನೆ-ಅತಿಕ್ರಮಣ ಅಥವಾ ಮನೆ ಒಡೆಯುವುದು) ಮತ್ತು ಭಾರತೀಯ ದಂಡ ಸಂಹಿತೆಯ 457ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಮುದ್ರಣಾಲಯವು ಉನ್ನತ ಮಟ್ಟದ ಭದ್ರತೆಯನ್ನು ಹೊಂದಿದೆ. ಹೀಗಿದ್ದೂ ನಡೆದಿರುವ ಕಳ್ಳತನವು ಮುದ್ರಣಾಲಯ ಮತ್ತು ಪೊಲೀಸರನ್ನು ಆಘಾತಗೊಳಿಸಿದೆ.02

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.