ಮುಂಬೈ: ಮಹಾರಾಷ್ಟ್ರದಲ್ಲಿ ಶನಿವಾರ ಇಬ್ಬರಿಗೆ ಓಮೈಕ್ರಾನ್ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು 110 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಪೈಕಿ 57ಕ್ಕೂ ಅಧಿಕ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ ನೆಗೆಟಿವ್ ವರದಿ ಬಂದ ಬಳಿಕ ಎಲ್ಲರೂ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

'ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ಔರಂಗಾಬಾದ್‌ನ ಇಬ್ಬರಲ್ಲಿ ಓಮೈಕ್ರಾನ್ ಪತ್ತೆಯಾಗಿದ್ದು, ಒಬ್ಬರಿಗೆ 50 ವರ್ಷ ಮತ್ತು ಮತ್ತೊಬ್ಬರಿಗೆ 33 ವರ್ಷ. ಇವರಲ್ಲಿ ಒಬ್ಬರು ಇತ್ತೀಚೆಗಷ್ಟೇ ದುಬೈನಿಂದ ಹಿಂದಿರುಗಿದ್ದರೆ, ಮತ್ತೊಬ್ಬರು ವಿದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರ ಸಂಪರ್ಕ ಹೊಂದಿದ್ದರು. ಒಬ್ಬರಿಗೆ ಮಾತ್ರ ಸೌಮ್ಯ ಲಕ್ಷಣಗಳಿದ್ದವು' ಎಂದು ಹೇಳಿಕೆಯಲ್ಲಿ ತಿಳಿಸಿದೆ.

'ನವೆಂಬರ್ 1ರಿಂದೀಚೆಗೆ ರಾಜ್ಯಕ್ಕೆ ಬಂದಿರುವ 729 ಅಂತರರಾಷ್ಟ್ರೀಯ ಪ್ರಯಾಣಿಕರ ಮಾದರಿಗಳನ್ನು ವಂಶವಾಹಿ ಸಂರಚನಾ ವಿಶ್ಲೇಷಣೆಗಾಗಿ (ಜೀನೋಮ್ ಸೀಕ್ವೆನ್ಸಿಂಗ್)ಕಳುಹಿಸಲಾಗಿದೆ. ಈ ಪೈಕಿ ಇನ್ನು 162 ಜನರ ವರದಿ ಬರಬೇಕಿದೆ' ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.